Sunday, June 7, 2026
Homeಕರಾವಳಿಮಂಗಳೂರುಬೆಳ್ತಂಗಡಿ: ಕೊಕ್ಕಡದಲ್ಲಿ ಮನೆಯಲ್ಲಿಟ್ಟಿದ್ದ ಚಿನ್ನಾಭರಣ ಕಳ್ಳತನ; ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಪ್ರಕರಣ

ಬೆಳ್ತಂಗಡಿ: ಕೊಕ್ಕಡದಲ್ಲಿ ಮನೆಯಲ್ಲಿಟ್ಟಿದ್ದ ಚಿನ್ನಾಭರಣ ಕಳ್ಳತನ; ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಪ್ರಕರಣ

- Advertisement -
- Advertisement -

ಬೆಳ್ತಂಗಡಿ : ಮನೆಯ ಗೊದ್ರೆಜ್ ನಲ್ಲಿಟ್ಟಿದ ಚಿನ್ನಾಭರಣವನ್ನು ಯಾರೋ ಕಳ್ಳರು ಕಳ್ಳತನ ಮಾಡಿದ ಘಟನೆ ಜೂ.14 ರಂದು ಬೆಳ್ತಂಗಡಿಯ ರೆಖ್ಯಾದಲ್ಲಿ ನಡೆದಿದೆ. ಈ ಬಗ್ಗೆ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು. ಘಟನಾ ಸ್ಥಳಕ್ಕೆ ಧರ್ಮಸ್ಥಳ ಸಬ್ ಇನ್ಸ್ಪೆಕ್ಟರ್ ಸಮರ್ಥ ಆರ್ ಗಾಣಿಗೇರ ಮತ್ತು ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು ಈ ಬಗ್ಗೆ ತನಿಖೆ ನಡೆಸುತ್ತಿದ್ದಾರೆ.

ಏನಿದು ಪ್ರಕರಣ?;  ಶ್ರೀಮತಿ ಕುಸುಮರವರು ತನ್ನ ಗಂಡ ಅಣ್ಣಿ @ ಆನಂದ ಗೌಡ ಬೆಳ್ತಂಗಡಿ ತಾಲೂಕು ರೆಖ್ಯಾ ಗ್ರಾಮದ ಕಟ್ಟೆ ಎಂಬಲ್ಲಿ ವಾಸವಿದ್ದು ಇಬ್ಬರು ದಿನಾ ಬೆಳಿಗ್ಗೆ ಕೆಲಸಕ್ಕೆ ಹೋಗುತ್ತಿದ್ದ ಸಂದರ್ಭ ಮನೆಗೆ ಬೀಗ ಹಾಕಿ ಬೀಗದ ಕೀಯನ್ನು ಕೊಟ್ಟಿಗೆಯಲ್ಲಿ ಬಚ್ಚಿಟ್ಟು ಕೆಲಸಕ್ಕೆ ಹೋಗಿ ಸಂಜೆ ವಾಪಾಸು ಮನೆಗೆ ಬರುತ್ತಿದ್ದರು. ಕುಸುಮ ಬಳಿ ಸುಮಾರು 3 ಪವನ್ ತೂಕದ ಕರಿಮಣಿ ಸರ, ಸುಮಾರು 1 ಪವನ್ ತೂಕದ ಬಳೆ, ಸುಮಾರು 2 ಪವನ್ ತೂಕದ ಚಿನ್ನದ ಚೈನ್, ಸುಮಾರು ಅರ್ಧ ಪವನ್ ತೂಕದ ಒಂದು ಜೊತೆ ಕಿವಿಯೋಳೆ ಒಟ್ಟು ರೂ 2,60,000 ರೂಪಾಯಿ ಅಂದಾಜು ಮೌಲ್ಯದ 52 ಗ್ರಾಂ ಚಿನ್ನಾಭರಣವಿತ್ತು. ಚಿನ್ನಾಭರಣವನ್ನು ಮೇ.23 ರಂದು ಕೊನೆಯದಾಗಿ ನೋಡಿರುತ್ತಾರೆ. ಕುಸುಮಾ ಹಾಗೂ ಗಂಡ ಆನಂದ ಗೌಡ ಶಿರಾಡಿ ದೇವಸ್ಥಾನಕ್ಕೆ ಹೋಗುವ ಸಲುವಾಗಿ ಜೂ.14 ರಂದು ಸಂಜೆ 6.30 ಗಂಟೆ ಸುಮಾರಿಗೆ ಕಪಾಟಿನಲ್ಲಿಟ್ಟ ಚಿನ್ನಾಭರಣವನ್ನು ತೆಗೆಯಲು ಹೋದಾಗ ಕಪಾಟು ಬೀಗ ಹಾಕಿದ ಸ್ಥಿತಿಯಲ್ಲಿ ಇತ್ತು. ಆದರೆ ಕಪಾಟಿನಲ್ಲಿದ್ದ ಚಿನ್ನಾಭರಣ ಯಾರೋ ಕಳ್ಳರು ಕಳವು ಮಾಡಿರುತ್ತಾರೆ ಎಂದು ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಜೂ.15 ರಂದು ಕುಸುಮಾ ದೂರು ನೀಡಿದ್ದಾರೆ. ಸ್ಥಳಕ್ಕೆ ಶ್ವಾನ ದಳ ಮತ್ತು ಬೆರಳಚ್ಚು ತಜ್ಞರು ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.

- Advertisement -

Latest News

error: Content is protected !!