Wednesday, June 24, 2026
Homeಕರಾವಳಿಮಂಗಳೂರುಬಂಟ್ವಾಳ; ಅಡಿಕೆ ಮತ್ತು ಕರಿಮೆಣಸು ವ್ಯಾಪಾರ ಮಾಡಿ ಲಕ್ಷಾಂತರ ರೂಪಾಯಿ ವಂಚಿಸಿ ವ್ಯಾಪಾರಿ ಪರಾರಿ

ಬಂಟ್ವಾಳ; ಅಡಿಕೆ ಮತ್ತು ಕರಿಮೆಣಸು ವ್ಯಾಪಾರ ಮಾಡಿ ಲಕ್ಷಾಂತರ ರೂಪಾಯಿ ವಂಚಿಸಿ ವ್ಯಾಪಾರಿ ಪರಾರಿ

- Advertisement -
- Advertisement -

ಬಂಟ್ವಾಳ; ಅಡಿಕೆ ಮತ್ತು ಕರಿಮೆಣಸು ವ್ಯಾಪಾರ ಮಾಡಿ ವ್ಯಕ್ತಿಯೊಬ್ಬ ಲಕ್ಷಾಂತರ ರೂಪಾಯಿ ವಂಚನೆ ಮಾಡಿರುವ ಘಟನೆ ಬಂಟ್ವಾಳದಲ್ಲಿ ನಡೆದಿದೆ. ಬಂಟ್ವಾಳ ನಿವಾಸಿ ಪ್ರವೀಣ್‌ ಡಿ ಸೋಜಾ (45)ವಂಚನೆಗೊಳಗಾದವರು. ಗ್ರಾಮದ ಮೈಂದಾಳದ ನಿವಾಸಿ ನೌಫಲ್‌ ಮಹಮ್ಮದ್‌  ವಂಚಿಸಿದಾತ.

ಬಂಟ್ವಾಳ ನಿವಾಸಿ ಪ್ರವೀಣ್‌ ಡಿ ಸೋಜಾ (45)ಎಂಬವರು ಕೃಷಿಕನಾಗಿ ಕೆಲಸ ಮಾಡಿಕೊಂಡಿದ್ದು, ತಾನು ಬೆಳೆಸಿದ ಅಡಿಕೆಯನ್ನು ಆರೋಪಿ ನಾವೂರ ಗ್ರಾಮದ ಮೈಂದಾಳದ ನಿವಾಸಿ ನೌಫಲ್‌ ಮಹಮ್ಮದ್‌ ಎಂಬವರ ಬಂಟ್ವಾಳ ತಾಲೂಕು ಬಿ ಕಸ್ಬಾ ಗ್ರಾಮದ ಬಡ್ಡಕಟ್ಟೆ ಜೀವನ ಜ್ಯೋತಿ  ಬಿಲ್ಡಿಂಗ್‌ ನಲ್ಲಿ ಎ. ಬಿ. ಸುಪಾರಿ ಅಂಗಡಿಗೆ ಮಾರಾಟ ಮಾಡಿದ್ದರು. ಆರೋಪಿ ಪ್ರವೀಣ್ ಅವರಿಗೆ ಅಡಿಕೆ ಮಾರಾಟ ಮಾಡಿದಾಗ  ಸ್ವಲ್ಪ ಹಣವನ್ನು ಕೊಡುತ್ತಿದ್ದು, ಬಳಿಕ  ಸ್ವಲ ದಿನಗಳ ನಂತರ ಹಣವನ್ನು ಕೊಡುತ್ತಿದ್ದ. ಅದೇ ರೀತಿ ದಿನಾಂಕ:08.03.2025 ರಂದು ಬೆಳಿಗ್ಗೆ ಪ್ರವೀಣ್ ನೌಫಲ್‌ ಮಹಮ್ಮದ್‌  ರವರ ಎ.ಬಿ ಸುಪಾರಿ ಅಂಗಡಿಗೆ ಹೋಗಿ ಸುಮಾರು 6.5 ಕ್ವಿಂಟಾಲ್‌ ಅಡಿಕೆಯನ್ನು ಮಾರಾಟ ಮಾಡಿದ್ದರು. ಅದರ ಅಂದಾಜು ಮೌಲ್ಯ 3,50,000/- ರೂ ಹಣವನ್ನು  ಪ್ರವೀಣ್ ಗೆ ನೌಫಲ್ ಕೊಟ್ಟಿರಿಲಿಲ್ಲ. ಇನ್ನು ದಿನಾಂಕ 09.06.2025 ರಂದು ರಾತ್ರಿ  ಪ್ರವೀಣ್ ಗೆ   ನೌಫಲ್ ತಾನು ನಷ್ಟದಲ್ಲಿದ್ದು, ಬಾಕಿ ಹಣವನ್ನು ಸ್ವಲ್ಪ ಸ್ವಲ್ಪವಾಗಿ ನೀಡುವುದಾಗಿ ಮೆಸೇಜ್‌ ಕಳುಹಿಸಿರುತ್ತಾನೆ. ಇದರಿಂದ ಗಾಬರಿಗೊಂಡ ಪ್ರವೀಣ್  ದಿನಾಂಕ 10-06-2025 ರಂದು ಬೆಳಿಗ್ಗೆ ನೌಫಲ್  ಅಂಗಡಿಗೆ ಹೋಗಿ ನೋಡಿದಾಗ ಬೀಗ ಹಾಕಿದ್ದು,ಮನೆಗೆ ಬೀಗ ಹಾಕಿತ್ತು. ನೌಫಲ್  ಮೊಬೈಲ್ ಸ್ವಿಚ್ಡ್‌ ಆಪ್‌  ಆಗಿದ್ದು, ಆತನೊಂದಿಗೆ ಅಡಿಕೆ ವ್ಯಾಪಾರ ಮಾಡಿ, ಹಣ ಪಡೆಯಲು ಬಾಕಿಯಿದ್ದ  ಇತರೆ 24 ಜನರು ಕೂಡ ಅಂಗಡಿ ಬಳಿ ಬಂದಿದ್ದರು. ಆರೋಪಿ ತನ್ನೊಂದಿಗೆ ಅಡಿಕೆ ಮತ್ತು ಕರಿಮೆಣಸು ವ್ಯಾಪಾರ ಮಾಡಿಕೊಂಡಿದ್ದವರಿಗೆ ಒಟ್ಟು ರೂ 94,77,810 /- ನ್ನು ನೀಡದೆ  ತಲೆಮರೆಸಿಕೊಂಡಿದ್ದು,  ಈ ಬಗ್ಗೆ ಬಂಟ್ವಾಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಸಲಾಗುತ್ತಿದೆ.

- Advertisement -

Latest News

error: Content is protected !!