Friday, June 27, 2025
Homeಪ್ರಮುಖ-ಸುದ್ದಿಆರ್ ಸಿಬಿ ವಿಜಯೋತ್ಸವದ ದಿನ ಮೆಟ್ರೋ ದಲ್ಲಿ ದಾಖಲೆಯ ಸಂಖ್ಯೆಯಲ್ಲಿ ಪ್ರಯಾಣಿಕರ ಸಂಚಾರ; ಬರೋಬ್ಬರಿ 9...

ಆರ್ ಸಿಬಿ ವಿಜಯೋತ್ಸವದ ದಿನ ಮೆಟ್ರೋ ದಲ್ಲಿ ದಾಖಲೆಯ ಸಂಖ್ಯೆಯಲ್ಲಿ ಪ್ರಯಾಣಿಕರ ಸಂಚಾರ; ಬರೋಬ್ಬರಿ 9 ಲಕ್ಷ ಪ್ರಯಾಣಿಕರಿಂದ ಪ್ರಯಾಣ

spot_img
- Advertisement -
- Advertisement -

ಬೆಂಗಳೂರು: ಆರ್ ಸಿಬಿ ವಿಜಯೋತ್ಸವದ ದಿನ ಮೆಟ್ರೋ ದಲ್ಲಿ ದಾಖಲೆಯ ಸಂಖ್ಯೆಯಲ್ಲಿ ಪ್ರಯಾಣಿಕರು ಪ್ರಯಾಣ ಮಾಡಿದ್ದಾರೆ.ಜೂನ್ 4 ರಂದು ಒಂದೇ ದಿನ ಮೆಟ್ರೋದಲ್ಲಿ 9 ಲಕ್ಷಕ್ಕೂ ಹೆಚ್ಚು ಜನ ಪ್ರಯಾಣ ಬೆಳೆಸಿದ್ದಾರೆ. ಆದರೆ ಪ್ರಯಾಣಿಕರನ್ನ ಕಂಟ್ರೋಲ್ ಮಾಡಲು ಮೆಟ್ರೋ ಸಿಬ್ಬಂದಿ ಹರಸಾಹಸ ಪಟ್ಟಿದ್ದರು. ಪ್ರತೀ ದಿನ ಓಡಾಡುವ ಮೆಟ್ರೋ ಪ್ರಯಾಣಿಕರ ಸಂಖ್ಯೆಯಲ್ಲಿ ಸುಮಾರು ಮೂರು ಪಟ್ಟು ಹೆಚ್ಚಳವಾಗಿತ್ತು.

ಮೆಟ್ರೋ ಮಾರ್ಗ 1 ರಲ್ಲಿ 4,78,334 ಪ್ರಯಾಣಿಕರು ಪ್ರಯಾಣಿಸಿದ್ರೆ, ಮೆಟ್ರೋ ಮಾರ್ಗ 2 ರಲ್ಲಿ 2,84,674 ಪ್ರಯಾಣಿಕರು ಪ್ರಯಾಣ ಮಾಡಿದ್ದರು. ಕೆಂಪೇಗೌಡ (ಕೆಜಿಡಬ್ಲ್ಯೂಎ) ದಲ್ಲಿನ ಇಂಟರ್‌ಚೇಂಜ್‌ನಲ್ಲಿ 2,03,724 ಪ್ರಯಾಣಿಕರು ಪ್ರಯಾಣಿಸಿದ್ದು, ಆದ್ರಲ್ಲೂ ಕಬ್ಬನ್ ಪಾರ್ಕ್, ವಿಧಾನಸೌಧ, ಎಂಜಿ ರಸ್ತೆ ಮತ್ತು ಸರ್ ಎಂ. ವಿಶ್ವೇಶ್ವರಯ್ಯ ಸೇರಿದಂತೆ ಸೆಂಟ್ರಲ್ ಬ್ಯುಸಿನೆಸ್ ಡಿಸ್ಟ್ರಿಕ್ಟ್ (ಸಿಬಿಡಿ) ನಿಲ್ದಾಣಗಳಲ್ಲಿನ ಅಪಾರ ಪ್ರಯಾಣಿಕರು ಸಂಚಾರ ಮಾಡಿದ್ದಾರೆ.

ನಿನ್ನೆ ಒಂದೇ ದಿನದಲ್ಲಿ ಒಟ್ಟು 9,66,732 ಪ್ರಯಾಣಿಕರು ಮೆಟ್ರೋದಲ್ಲಿ ಪ್ರಯಾಣಿಸಿದ್ದಾರೆ. ಇದು ಮೆಟ್ರೋ ಇತಿಹಾಸದಲ್ಲೇ ಮೊದಲ ಬಾರಿಗೆ ಇಷ್ಟೊಂದು ಮಂದಿ ಪ್ರಯಾಣ ಬೆಳೆಸಿದ್ದು ಎನ್ನಲಾಗಿದೆ.

- Advertisement -
spot_img

Latest News

error: Content is protected !!