Wednesday, June 3, 2026
Homeತಾಜಾ ಸುದ್ದಿದ.ಕ. ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಬೆಂಗಳೂರಿನಲ್ಲಿದ್ದು ರಿಮೋಟ್ ಕಂಟ್ರೋಲ್ ರೀತಿ ಜಿಲ್ಲೆಯ ಬಗ್ಗೆ ಬೇಜವಾಬ್ದಾರಿ...

ದ.ಕ. ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಬೆಂಗಳೂರಿನಲ್ಲಿದ್ದು ರಿಮೋಟ್ ಕಂಟ್ರೋಲ್ ರೀತಿ ಜಿಲ್ಲೆಯ ಬಗ್ಗೆ ಬೇಜವಾಬ್ದಾರಿ ಮಾತು; ಶಾಸಕ ಡಾ. ಭರತ್ ಶೆಟ್ಟಿ ಆರೋಪ

- Advertisement -
- Advertisement -

ಬೆಂಗಳೂರು: ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಬೆಂಗಳೂರಿನಲ್ಲೇ ಇದ್ದು ರಿಮೋಟ್ ಕಂಟ್ರೋಲ್ ರೀತಿಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಬಹಳ ಬೇಜವಾಬ್ದಾರಿಯಿಂದ ಬಗ್ಗೆ ಮಾತಾಡುತ್ತಾರೆ ಎಂದು ಮಂಗಳೂರು ಉತ್ತರ ಶಾಸಕ ಡಾ. ಭರತ್ ಶೆಟ್ಟಿ ಆರೋಪಿಸಿದ್ದಾರೆ.

ಬಂಟ್ವಾಳದಲ್ಲಿ ನಿನ್ನೆ ನಡೆದ ಕೊಲೆ ಪ್ರಕರಣದ ಹಿನ್ನೆಲೆಯಲ್ಲಿ
ಆರ್ ಎಸ್ ಎಸ್ ಮತ್ತು ಬಿಜೆಪಿ ಬಗ್ಗೆ ಸಚಿವ ದಿನೇಶ್ ಗುಂಡೂರಾವ್ ನೀಡಿದ್ದ ಹೇಳಿಕೆಗೆ ಬೆಂಗಳೂರಿನಲ್ಲಿ ಪ್ರತಿಕ್ರಿಯೆ ನೀಡಿದ ಶಾಸಕ ಭರತ್ ಶೆಟ್ಟಿ, ಕಾಂಗ್ರೆಸ್ ತುಷ್ಟಿಕರಣದ ನೀತಿಯೇ ಇದಕ್ಕೆಲ್ಲಾ ಕಾರಣ ಎಂದು ಹೇಳಿದ್ದಾರೆ. ‌

ಅಲ್ಲದೇ, ಕಾಂಗ್ರೆಸ್ ಜಿಹಾದಿ ಶಕ್ತಿಗಳಿಗೆ ಧೈರ್ಯ ತುಂಬುವ ಕೆಲಸ ಮಾಡುತ್ತಿದೆ ಎಂದು ಆರೋಪ ಮಾಡಿರುವ ಭರತ್ ಶೆಟ್ಟಿ, ದಿನೇಶ್ ಗುಂಡೂರಾವ್ ಮತ್ತು ಅವರ ಕಾಂಗ್ರೆಸ್ ಪಕ್ಷ ಮಾಡುವ ತುಷ್ಟಿಕರಣ ರಾಜಕಾರಣವೇ ಇದಕ್ಕೆಲ್ಲಾ ಸಾಕ್ಷಿ ಎಂದು ಹೇಳಿದ್ದಾರೆ.

ಇದೇ ವೇಳೆ, ದಕ್ಷಿಣ ಕನ್ನಡ ಜಿಲ್ಲೆಯ ಕಾಂಗ್ರೆಸ್ ಮುಸ್ಲಿಂ ಮುಖಂಡರು ರಾಜೀನಾಮೆ ನೀಡುತ್ತಿರುವ ವಿಚಾರ ಅವರ ಪಾರ್ಟಿ ಒಳಗಿನ ವ್ಯವಸ್ಥೆಯಾಗಿದ್ದು, ಸುಹಾಸ್ ಶೆಟ್ಟಿ ಹತ್ಯೆ ನಡೆದಾಗ‌ ಮುಸ್ಲಿಂ ಮುಖಂಡರು ಧಮಕಿ ಹಾಕಿದ ಕಾರಣ ಕಾಂಗ್ರೆಸ್ ನಾಯಕರು ಯಾರೂ ಅವರ ಮನೆಗೆ ಹೋಗಲಿಲ್ಲ, ಈಗಲೂ ಹಾಗೆಯೇ ಆಗುತ್ತಿರಬಹುದು ಎಂದೂ ಶಾಸಕ ಭರತ್ ಶೆಟ್ಟಿ ಹೇಳಿದ್ದಾರೆ.

- Advertisement -

Latest News

error: Content is protected !!