Wednesday, June 3, 2026
Homeಕರಾವಳಿಉಡುಪಿಉಡುಪಿ: ಕೆಎಸ್ ಆರ್ ಟಿಸಿ ಬಸ್ ಓವರ್ ಟೇಕ್ ಮಾಡಲು ಹೋಗಿ ಪಲ್ಟಿಯಾದ ಖಾಸಗಿ ಬಸ್

ಉಡುಪಿ: ಕೆಎಸ್ ಆರ್ ಟಿಸಿ ಬಸ್ ಓವರ್ ಟೇಕ್ ಮಾಡಲು ಹೋಗಿ ಪಲ್ಟಿಯಾದ ಖಾಸಗಿ ಬಸ್

- Advertisement -
- Advertisement -

ಉಡುಪಿ: ಕೆಎಸ್ ಆರ್ ಟಿಸಿ ಬಸ್ ಅನ್ನು ಓವರ್ ಟೇಕ್ ಮಾಡುವ ರಭಸದಲ್ಲಿ ಚಾಲಕನ ನಿಯಂತ್ರಣ ತಪ್ಪಿ ಖಾಸಗಿ ಬಸ್ ಪಲ್ಟಿಯಾದ ಘಟನೆ ಕಾಪು ಸಮೀಪ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ನಡೆದಿದೆ.

ಪಲ್ಟಿಯಾದ ಖಾಸಗಿ ಬಸ್ ನಲ್ಲಿದ್ದ ನಾಲ್ವರು ಪ್ರಯಾಣಿಕರಿಗೆ ಗಂಭೀರ ಗಾಯಗಳಾಗಿದ್ದು, ಹತ್ತಕ್ಕೂ ಹೆಚ್ಚು ಜನರಿಗೆ ಸಣ್ಣ ಪುಟ್ಟ ಗಾಯಗಳಾಗಿವೆ.

ಅಪಘಾತ ಸಂಭವಿಸಿದ ಕೂಡಲೇ ಸ್ಥಳಕ್ಕೆ ಧಾವಿಸಿದ ಸಾರ್ವಜನಿಕರು, ಬಸ್ಸಿನ ಕಿಟಕಿಯ ಮೂಲಕ ಪ್ರಯಾಣಿಕರನ್ನು ಹೊರಗೆಳೆದು ರಕ್ಷಣೆ ಮಾಡಿದ್ದಾರೆ. ಅತಿ ವೇಗದಿಂದ ಸಂಚರಿಸಿದ ಕಾರಣ ಬಸ್ ಪಲ್ಟಿಯಾಗಿದ್ದು, ಕಾಪು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಅಪಘಾತ ಸಂಭವಿಸಿದೆ.

- Advertisement -

Latest News

error: Content is protected !!