Friday, June 5, 2026
Homeಕರಾವಳಿಬಂಟ್ವಾಳ : ಯುವಕನಿಗೆ ತಂಡವೊಂದರಿಂದ ಚಾಕುವಿನಿಂದ ಇರಿತ

ಬಂಟ್ವಾಳ : ಯುವಕನಿಗೆ ತಂಡವೊಂದರಿಂದ ಚಾಕುವಿನಿಂದ ಇರಿತ

- Advertisement -
- Advertisement -

ಬಂಟ್ವಾಳ : ಯುವಕನಿಗೆ ತಂಡವೊಂದು ಚಾಕುವಿನಿಂದ ಇರಿದು ಪರಾರಿಯಾಗಿರುವ ಘಟನೆ ಶುಕ್ರವಾರ ರಾತ್ರಿ ಪಾಣೆಮಂಗಳೂರು ಸಮೀಪದ ಅಕ್ಕರಂಗಡಿ ಬಸ್ಸು ನಿಲ್ದಾಣ ಬಳಿ ನಡೆದಿದೆ. ಇರಿತಕ್ಕೊಳಗಾದ ವ್ಯಕ್ತಿಯನ್ನು ಹಮೀದ್ ಯಾನೆ ಅಮ್ಮಿ ಎಂದು ತಿಳಿದುಬಂದಿದೆ.

ಹಮೀದ್ ಪೈಂಟರ್ ವೃತ್ತಿ ಮಾಡುತ್ತಿದ್ದು ಕೈಗೆ ಗಂಭೀರ ಗಾಯವಾಗಿದ್ದು, ಅವರನ್ನು ಸ್ಥಳೀಯರು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ಸಾಗಿಸಿದ್ದಾರೆ.ಸುಹಾಸ್ ಹತ್ಯೆ ಯಿಂದ ಬುಗಿಲೆದ್ದಿದ್ದ ದಕ್ಷಿಣ ಕನ್ನಡ ಜಿಲ್ಲೆ ಸಹಜ ಸ್ಥಿತಿಗೆ ಮರಳಿದ್ದು ಮತ್ತೆ ಉದ್ವಿಗ್ನ ಪರಿಸ್ಥಿತಿ ಉಂಟಾಗಿದೆ. ಯಾವ ಕಾರಣಕ್ಕೆ ಈ ಘಟನೆ ನಡೆದಿದೆ ಎಂಬುದು ಪ್ರಾಥಮಿಕ ತನಿಖೆಯಿಂದ ತಿಳಿಯಬೇಕಾಗಿದೆ. ಘಟನಾ ಸ್ಥಳಕ್ಕೆ ಬಂಟ್ವಾಳ ಪೊಲೀಸರು ದೌಡಾಯಿಸಿದ್ದು ಪರಿಶೀಲನೆ ನಡೆಸುತ್ತಿದ್ದಾರೆ.

- Advertisement -

Latest News

error: Content is protected !!