Thursday, June 4, 2026
Homeಕರಾವಳಿಮಂಗಳೂರುಮಂಗಳೂರು;  ಕಾರು ಡಿಕ್ಕಿ ಹೊಡೆದು ಪಾದಾಚಾರಿ ಮಹಿಳೆ ಸಾವು

ಮಂಗಳೂರು;  ಕಾರು ಡಿಕ್ಕಿ ಹೊಡೆದು ಪಾದಾಚಾರಿ ಮಹಿಳೆ ಸಾವು

- Advertisement -
- Advertisement -

ಮಂಗಳೂರು;  ಕಾರು ಡಿಕ್ಕಿ ಹೊಡೆದು ಪಾದಾಚಾರಿ ಮಹಿಳೆ ಸಾವನ್ನಪ್ಪಿರುವ ಘಟನೆ ಕುತ್ತಾರ್ ಸಮೀಪದ ಪಂಡಿತ್ ಹೌಸ್ ಬಳಿ ನಡೆದಿದೆ. ಪಂಡಿತ್ ಹೌಸ್ ನಿವಾಸಿ ಪೂರ್ಣಿಮಾ (59) ಮೃತ ಮಹಿಳೆ.

ಪೂರ್ಣಿಮಾ ಬಸ್‌ನಿಂದ ಇಳಿದು ರಸ್ತೆ ದಾಟುವ ಸಂದರ್ಭ ವೈದ್ಯಕೀಯ ವಿದ್ಯಾರ್ಥಿ ಚಲಾಯಿಸುತ್ತಿದ್ದ ಕಾರು ಢಿಕ್ಕಿ ಹೊಡೆದಿದೆ. ಪರಿಣಾಮ ಪೂರ್ಣಿಮಾ ಅವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಪೂರ್ಣಿಮಾ ಅವರ ಬಾವನ ಪುತ್ರನ ವಿವಾಹ ಸಮಾರಂಭವಿತ್ತು. ಆ ಪ್ರಯುಕ್ತ ಮದುವೆ ಮನೆಗೆ ತೆರಳಿ ವಾಪಸ್ಸಾಗುವಾಗ ದುರಂತ ಸಂಭವಿಸಿದೆ.

ಮಂಗಳೂರು ದಕ್ಷಿಣ ಸಂಚಾರಿ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಮೃತರು ಪತಿ, ಓರ್ವ ಪುತ್ರನನ್ನು ಅಗಲಿದ್ದಾರೆ.

- Advertisement -

Latest News

error: Content is protected !!