ಬಂಟ್ವಾಳ: ಹಿಂದೂ ಕಾಯðಕರ್ತ ಸುಹಾಸ್ ಶೆಟ್ಟಿ ಹತ್ಯೆ ಬೆನ್ನಲ್ಲೇ ಅನೇಕ ಹಿಂದೂ ಮುಖಂಡರಿಗೆ ಜೀವಬೆದರಿಕೆ ಸಂದೇಶಗಳು ರವಾನೆಯಾಗುತ್ತಿದ್ದು, ಹಿಂದೂ ಸಂಘಟನೆ ಮುಂದಾಳು ಪುದು ಗ್ರಾಮದ ಭರತ್ ಕುಮ್ಡೇಲು ಅವರಿಗೂ ಸಾಮಾಜಿಕ ಜಾಲತಾಣದಲ್ಲಿ ಜೀವ ಬೆದರಿಕೆ ಹಾಕಿದ ಸಂದೇಶ ಹರಿದಾಡುತ್ತಿದ್ದು, ಈ ಬಗ್ಗೆ ಬಂಟ್ವಾಳ ಗ್ರಾಮಾಂತರ ಪೊಲೀಸರು ಸುಮೊಟೋ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
ಗ್ರಾಮಾಂತರ ಠಾಣೆಯ ಸ್ಪೆಷಲ್ ಬ್ರ್ಯಾಂಚ್‌ನಲ್ಲಿ ಕರ್ತವ್ಯದಲ್ಲಿರುವ ಕೃಷ್ಣ ನಾಯ್ಕ ನೀಡಿದ ದೂರಿನಂತೆ ಪ್ರಕರಣ ದಾಖಲಾಗಿದೆ.
ಹಿಂದೂ ಸಮುದಾಯದ ಸಂಘಟನೆಯ ವ್ಯಕ್ತಿಯನ್ನು ಕೆರಳಿಸುವ ಉದ್ದೇಶದಿಂದ ಆನ್ ಫಿಕ್ಸ್ ಲೀಡರ್ ಎಂದು ಬರೆದಿರುವ ಇನ್‌ಸ್ಟಾಗ್ರಾಮ್ ಚಿಹ್ನೆ ಇರುವ ಪೋಸ್ಟ್ ಹರಿದಾಡುತ್ತಿದ್ದು, ಪೋಸ್ಟ್ ಮಾಡಿದ ಅಪರಿಚಿತ ವ್ಯಕ್ತಿಯು ಅವಹೇಳನಕಾರಿಯಾಗಿ ಪೋಸ್ಟ್ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಯ ಬಿಟ್ಟಿದ್ದಾನೆ.
ಇನ್ನು ಸಂದೇಶ ಹರಿಯಬಿಟ್ಟಿರುವ ವ್ಯಕ್ತಿಯ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಪೊಲೀಸ್ ಮೂಲಗಳು ತಿಳಿಸಿವೆ.


