Tuesday, June 9, 2026
Homeಕರಾವಳಿಮಂಗಳೂರುಪುತ್ತೂರು ತಾಲೂಕಿನ ಕೊಳ್ತಿಗೆ ಗ್ರಾಮದಲ್ಲಿ ಕಾಡಾನೆ ದಾಳಿಗೆ ಮಹಿಳೆ ಬಲಿ

ಪುತ್ತೂರು ತಾಲೂಕಿನ ಕೊಳ್ತಿಗೆ ಗ್ರಾಮದಲ್ಲಿ ಕಾಡಾನೆ ದಾಳಿಗೆ ಮಹಿಳೆ ಬಲಿ

- Advertisement -
- Advertisement -

ಪುತ್ತೂರು; ಕಾಡಾನೆ ದಾಳಿಗೆ ಮಹಿಳೆ ಬಲಿಯಾಗಿರುವ ಘಟನೆ ಕೊಳ್ತಿಗೆ ಗ್ರಾಮದ  ಕಣಿಯಾರು ಮಲೆ ಅರ್ತಿಯಡ್ಕ ಸಿಆರ್‌ಸಿ ಕಾಲೋನಿ ಬಳಿ ನಡೆದಿದೆ. ಸೇಲಮ್ಮ (60) ಮೃತ ಮಹಿಳೆ.

ಮಂಗಳವಾರ (ಏ.29) ಮುಂಜಾನೆ ರಬ್ಬರ್‌ ಟ್ಯಾಪಿಂಗ್‌ಗೆಂದು ಬಂದಿದ್ದ ಅರ್ತಿಯಡ್ಕದ ಸೇಲಮ್ಮ ಅವರ ಮೇಲೆ ಕಾಡಾನೆ ದಾಳಿ ಮಾಡಿದೆ. ಆನೆ ದಾಳಿಯಿಂದ ಮಹಿಳೆ ಸ್ಥಳದಲ್ಲೇ ಸಾವಿಗೀಡಾಗಿದ್ದಾರೆ. ಬೆಳಗ್ಗೆ ಟ್ಯಾಪಿಂಗ್ ಮಾಡುತ್ತಿದ್ದ ವೇಳೆ ಏಕಾಏಕಿ ಕಾಡಾನೆ ಪ್ರತ್ಯಕ್ಷವಾಗಿದ್ದು ಜೊತೆಗಿದ್ದ ಇತರರು ಓಡಿ ಹೋಗಿ ತಪ್ಪಿಸಿಕೊಂಡಿದ್ದಾರೆ. ಆದರೆ ವಯಸ್ಸಾಗಿದ್ದರಿಂದ ಸೇಲಮ್ಮ ಅವರಿಗೆ ಓಡಲು ಸಾಧ್ಯವಾಗಿಲ್ಲ. ಈ ವೇಳೆ ಕಾಡಾನೆ ದಾಳಿ ಮಾಡಿ ಕೊಂದು ಹಾಕಿದೆ.

- Advertisement -

Latest News

error: Content is protected !!