ಬಂಟ್ವಾಳ; ಅರಸು ಶ್ರೀ ಗುಡ್ಡೆಚಾಮುಂಡಿ, ಪ್ರಧಾನಿ ಪಂಜುರ್ಲಿ ಬಂಟೆವಿ ಮಲೆಕೊರತಿ ದೈವಗಳ ನೂತನ ಅಂತರಗುತ್ತು ಚಾವಡಿ ಪ್ರವೇಶ ಹಾಗೂ ದೈವಗಳ ಪುನರ್ ಪ್ರತಿಷ್ಠೆ ಕಾರ್ಯಕ್ರಮ ಮೇ 1 ಹಾಗೂ 2 ರಂದು ನಡೆಯಲಿದೆ.
ತಾ. 01.05.02025ನೇ ಗುರುವಾರ ಸಾಯಂಕಾಲ 7.00 ಗಂಟೆಗೆ ತಂತ್ರಿಗಳ ಆಗಮನ, ಪ್ರಾರ್ಥನೆ, ಚಾವಡಿ-ಪರಿಗ್ರಹ, ಪುಣ್ಯಾಹ, ಪ್ರಾಸಾದ ಶುದ್ಧಿ, ವಾಸ್ತು ರಥೋಘ್ನ ಹೋಮ, ವಾಸ್ತು ಬಲ ನಡೆಯಲಿದೆ. ತಾ. 02.05.2025ನೇ ಶುಕ್ರವಾರ ಬೆಳಗ್ಗೆ 7.30ಕ್ಕೆ ಖನನಾದಿ ಸಪ್ತ ಶುದ್ದಿ ಬೆಆಗ್ಗೆ 9.00 ಗಂಟೆಯ ಮಿಥುನ ಲಗ್ನದಲ್ಲಿ ಚಾವಡಿ ಪ್ರವೇಶ ದೈವಗಳ ಸಾನಿಧ್ಯ ಪ್ರತಿಷ್ಠೆ, ಕಲಶಾಭಿಷೇಕ, ನಾಗತಂಬಿಲ,ಪ್ರಸಾದ ವಿತರಣೆ, ಮಂತ್ರಾಕ್ಷತೆ ಅನ್ನಸಂತರ್ಪಣೆ ನಡೆಯಲಿದೆ.
ತಾ. 01052025ನೇ ಗುರುವಾರ ಮಧ್ಯಾಹ್ನ 3ಗಂಟೆಗೆ ಹೊರಕಾಣಿಕೆಯ ಮೆರವಣಿಗೆ ನಡೆಯಲಿದೆ.
ತಾ. 02-05-2025ನೇ ಶುಕ್ರವಾರದಂದು ಬ್ರಹ್ಮಶ್ರೀ ವೇದಮೂರ್ತಿ ನೀಲೇಶ್ವರ ಉಚ್ಚಿಲತ್ತಾಯ ಪದ್ಮನಾಭ ತಂತ್ರಿಗಳ ನೇತೃತ್ವದಲ್ಲಿ ಮತ್ತು ಗ್ರಾಮ ದೈವದ ತಂತ್ರಿಗಳಾದ ಪಳನೀರು ಅನಂತ ಭಟ್ಟರ ಮಾರ್ಗದಶನದಲ್ಲಿ ಗ್ರಾಮ ದೈವಗಳಾದ ಅರಸು ಶ್ರೀ ಗುಡ್ಡೆಚಾಮುಂಡಿ, ಪ್ರಧಾನಿ ಪಂಜುರ್ಅ ಬಂಟೆವಿ ಮಲೆಕೊರತಿ ದೈವಗಳ ನೂತನ ಅಂತರಗುತ್ತು ಚಾವಡಿ ಪ್ರವೇಶ ಹಾಗೂ ದೈವಗಳ ಪುನರ್ ಪ್ರತಿಷ್ಠೆ ನಡೆಯಲಿದೆ.
ಈ ಪುಣ್ಯ ಕಾರ್ಯದಲ್ಲಿ ಭಗವದ್ಭಕ್ತರಾದ ತಾವೆಲ್ಲರೂ ಭಾಗವಹಿಸಿ ಪ್ರಸಾದ ಸ್ವೀಕರಿಸಿ ಗ್ರಾಮದೈವಗಳ ಕೃಪೆಗೆ ಪಾತ್ರರಾಗಬೇಕಾಗಿ ಕೇಳಿಕೊಳ್ಳಲಾಗಿದೆ.