Thursday, June 4, 2026
Homeತಾಜಾ ಸುದ್ದಿಬೆಂಗಳೂರು :ಸ್ಪೀಕರ್ ಹುದ್ದೆಗೆ ಅಗೌರವ ತೋರಿದ ಹಿನ್ನೆಲೆ;  18 ಬಿಜೆಪಿ ಶಾಸಕರನ್ನು 6 ತಿಂಗಳುಗಳ ಕಾಲ...

ಬೆಂಗಳೂರು :ಸ್ಪೀಕರ್ ಹುದ್ದೆಗೆ ಅಗೌರವ ತೋರಿದ ಹಿನ್ನೆಲೆ;  18 ಬಿಜೆಪಿ ಶಾಸಕರನ್ನು 6 ತಿಂಗಳುಗಳ ಕಾಲ ಅಮಾನತುಗೊಳಿಸಿ ಸ್ಪೀಕರ್ ಖಾದರ್ ಆದೇಶ

- Advertisement -
- Advertisement -

ಬೆಂಗಳೂರು :ಸ್ಪೀಕರ್ ಸ್ಥಾನಕ್ಕೆ ಅಗೌರವ ತೋರಿದ ಹಿನ್ನೆಲೆ 18 ಬಿಜೆಪಿ ಶಾಸಕರನ್ನು 6 ತಿಂಗಳುಗಳ ಕಾಲ ಅಮಾನತುಗೊಳಿಸಿ ಸ್ಪೀಕರ್ ಖಾದರ್ ಆದೇಶ ನೀಡಿದ್ದಾರೆ.

ವಿಧಾನಸಭೆಯಲ್ಲಿ ನಿನ್ನೆಯಿಂದ ಹನಿಟ್ರಾಪ್ ವಿಚಾರದ ಗದ್ದಲ, ಗಲಾಟೆ ಜೋರಾಗಿ ನಡೆಯುತ್ತಿತ್ತು. ಇನ್ನು ಸದನದ ಬಾವಿಗೆ ಇಳಿದು ಬಿಜೆಪಿ ಶಾಸಕರು ಗಲಾಟೆ ಮಾಡಿದ್ದಾರೆ.ಅಷ್ಟೇ ಅಲ್ಲದೇ ಬಿಜೆಪಿ ಶಾಸಕರು ಸ್ಪೀಕರ್ ಪೀಠಕ್ಕೆ ಪೇಪರ್ ಗಳನ್ನ ಎಸೆದಿದ್ದಾರೆ. ಈ ಹಿನ್ನೆಲೆಯಲ್ಲಿ ಸ್ಪೀಕರ್ ಸ್ಥಾನಕ್ಕೆ ಅಗೌರವ ತೋರಿದ್ದಕ್ಕಾಗಿ 18 ಶಾಸಕರನ್ನು ಅಮಾನತುಗೊಳಿಸಿ ಸ್ಪೀಕರ್ ಯು ಟಿ ಖಾದರ್ ಆದೇಶಿಸಿದ್ದಾರೆ.

ಬಿಜೆಪಿಯ ಶಾಸಕರಾದ ದೊಡ್ಡನಗೌಡ ಪಾಟೀಲ್, ಅಶ್ವಥ್ ನಾರಾಯಣ್, ಭರತ್ ಶೆಟ್ಟಿ, ಶರಣು ಸಲಗರ್, ಬಿ ಸುರೇಶ್ ಗೌಡ, ಮುನಿರತ್ನ, ಚನ್ನಬಸಪ್ಪ, ಉಮಾನಾಥ್ ಕೋಟ್ಯಾನ್, ಬಿಪಿ ಹರೀಶ್, ಧೀರಜ್ ಮುನಿರಾಜು, ಶೈಲೆಂದ್ರ ಬೆಲ್ದಾಳೆ, ಬಸವರಾಜ್ ಮತ್ತಿಮೂಡ್, ಯಶ್ ಪಾಲ್ ಸುವರ್ಣ, ಚಂದ್ರು ಲಮಾಣಿ, ಭೈರತಿ ಬಸವರಾಜ್ ಚನ್ನಬಸಪ್ಪ, ಅಮಾನತು ಅದಂತ ಶಾಸಕರು. ಶಾಸಕರನ್ನು ಅಮಾನತು ಆದ ಮೇಲೆ ಕೆಲಕಾಲ ಕಲಾಪವನ್ನು ಮುಂದೂಡಲಾಯಿತು. ಅಲ್ಲದೇ ಅಮಾನತಾದ ಶಾಸಕರನ್ನು ಮಾರ್ಷಲ್ಸ್ ಹೊರ ಹಾಕಿದ್ದಾರೆ.

- Advertisement -

Latest News

error: Content is protected !!