Thursday, June 4, 2026
Homeಕರಾವಳಿಮಂಗಳೂರುಮಂಗಳೂರು; ಕೊನೆಗೂ ಹೆತ್ತವರೊಂದಿಗೆ ಮನೆಗೆ ತೆರಳಿದ ದಿಗಂತ್

ಮಂಗಳೂರು; ಕೊನೆಗೂ ಹೆತ್ತವರೊಂದಿಗೆ ಮನೆಗೆ ತೆರಳಿದ ದಿಗಂತ್

- Advertisement -
- Advertisement -

ಮಂಗಳೂರು; ಫೆ.25 ರಂದು ತನ್ನ ಮನೆಯಿಂದ ನಾಪತ್ತೆಯಾಗಿದ್ದ ದಿಗಂತ್‌ ಮಾರ್ಚ್ 8 ರಂದು ಉಡುಪಿಯಲ್ಲಿ ಪತ್ತೆಯಾಗಿದ್ದ. ಆದರೆ ಆತನ ಮನೆಗೆ ಹೋಗಲು ಒಪ್ಪಿರಲಿಲ್ಲ. ಮಕ್ಕಳ ಕಲ್ಯಾಣ ಸಮಿತಿಯ ವಶದಲ್ಲಿದ್ದ ಮಗನನ್ನು ಮನೆಗೆ ಕಳುಹಿಸಿಕೊಡುವಂತೆ ಹೈಕೋರ್ಟ್ ಗೆ ಆತನ ಪೋಷಕರು ಮನವಿ ಸಲ್ಲಿಸಿದ್ದರು. ಅದರ ಬೆನ್ನಲ್ಲೇ ಮಕ್ಕಳ ಕಲ್ಯಾಣ ಸಮಿತಿ ವಶದಲ್ಲಿದ್ದ ದಿಗಂತ್ ಹೆತ್ತವರೊಂದಿಗೆ ನಿನ್ನೆ ತೆರಳಿದ್ದಾನೆ ಎನ್ನಲಾಗಿದೆ.

ಮಕ್ಕಳ ಕಲ್ಯಾಣ ಸಮಿತಿಯು ಆತನ ಹೇಳಿಕೆಯನ್ನು ಪಡೆದು ಆತ ಮನೆಗೆ ಹೋಗುವುದಕ್ಕೆ ಒಪ್ಪಿದ ನೀಡಿದ ಬಳಿಕ ಆತನನ್ನು ಮನೆಗೆ ಕಳುಹಿಸಿ ಕೊಡಲಾಗಿದೆ ಎನ್ನಲಾಗಿದೆ. ಫರಂಗಿಪೇಟೆಯ ಕಿದೆಬೆಟ್ಟಿನ ಮನೆಗೆ ಆತನನ್ನು ಕರೆದುಕೊಂಡು ಬರಲಾಗಿದೆಯೇ ಅಥವಾ ಸಂಬಂಧಿಕರ ಮನೆಗೆ ಕರೆದುಕೊಂಡು ಹೋಗಿದ್ದಾರೆಯೇ ಈ ಕುರಿತು ಮಾಹಿತಿ ಲಭ್ಯವಾಗಿಲ್ಲ.

- Advertisement -

Latest News

error: Content is protected !!