Thursday, June 4, 2026
Homeಕರಾವಳಿಮಂಗಳೂರುಬಜೆಟ್ ನಲ್ಲಿ ಅರಣ್ಯ ಮೂಲ ಬುಡಕಟ್ಟು ಸಮುದಾಯಕ್ಕೆ 200 ಕೋಟಿ ಅನುದಾನ ಅಭಿನಂದನೀಯ : ಜಿಲ್ಲಾ...

ಬಜೆಟ್ ನಲ್ಲಿ ಅರಣ್ಯ ಮೂಲ ಬುಡಕಟ್ಟು ಸಮುದಾಯಕ್ಕೆ 200 ಕೋಟಿ ಅನುದಾನ ಅಭಿನಂದನೀಯ : ಜಿಲ್ಲಾ ಮಲೆಕುಡಿಯ ಸಂಘ ದಕ್ಷಿಣ ಕನ್ನಡ

- Advertisement -
- Advertisement -

ಮಂಗಳೂರು : ಮಲೆಕುಡಿಯ ಸಮುದಾಯ ಸೇರಿದಂತೆ 12 ಅರಣ್ಯ ಮೂಲ ಬುಡಕಟ್ಟು ಸಮುದಾಯಗಳ ಅಭಿವೃದ್ಧಿಗೆ ಮಾನ್ಯ ಮುಖ್ಯಮಂತ್ರಿ ಗಳು ಬಜೆಟ್ ನಲ್ಲಿ 200 ಕೋಟಿ ಅನುದಾನ ಮೀಸಲಿಟ್ಟುರುವುದು ಹಾಗೂ ಅರಣ್ಯ ಮೂಲ ಬುಡಕಟ್ಟು ಸಮುದಾಯಗಳಿಗೆ ಸಿವಿಲ್ ಸರ್ವೀಸ್ ಸೇವೆಗಳಲ್ಲಿ ಪ್ರಾತಿನಿಧ್ಯ ಕಲ್ಪಿಸಲು ನೇರ ನೇಮಕಾತಿಯನ್ನು ಕೈಗೊಳ್ಳುವ ಘೋಷನೆ ಮಾಡಿರುವುದು ಶ್ಲಾಘನೀಯ. ಸಂಬಂಧ ಪಟ್ಟ ಇಲಾಖೆಗಳು ಸಮುದಾಯದ ಸಹಭಾಗಿತ್ವದಲ್ಲಿ ಯೋಜನೆಯನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸಬೇಕು ಎಂದು ಜಿಲ್ಲಾ ಮಲೆಕುಡಿಯ ಸಂಘದ ಅಧ್ಯಕ್ಷರಾದ ಹರೀಶ್ ಎಳನೀರ್ ಹಾಗೂ ಪ್ರಧಾನ ಕಾರ್ಯದರ್ಶಿ ಜಯೇಂದ್ರ ನಿಡ್ಲೆ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ

- Advertisement -

Latest News

error: Content is protected !!