Thursday, June 4, 2026
Homeಕರಾವಳಿ2025ನೇ ಸಾಲಿನ ಬಜೆಟ್ ನಲ್ಲಿ ಪುತ್ತೂರಿನ ಜನೆತೆಗೆ ಸಿಹಿ ಸುದ್ದಿ; ಹೊಸ ಮೆಡಿಕಲ್ ಕಾಲೇಜು ಸ್ಥಾಪನೆಗೆ...

2025ನೇ ಸಾಲಿನ ಬಜೆಟ್ ನಲ್ಲಿ ಪುತ್ತೂರಿನ ಜನೆತೆಗೆ ಸಿಹಿ ಸುದ್ದಿ; ಹೊಸ ಮೆಡಿಕಲ್ ಕಾಲೇಜು ಸ್ಥಾಪನೆಗೆ ಅನುದಾನ ಘೋಷಣೆ; ಅಶೋಕ್ ರೈಗೆ ಜೈಕಾರ ಹಾಕಿದ ಕಾಂಗ್ರೆಸ್ ಟೀಮ್

- Advertisement -
- Advertisement -

ಬೆಂಗಳೂರು: 2025-26ನೇ ಸಾಲಿನ ಬಜೆಟ್ ನಲ್ಲಿ ಪುತ್ತೂರಿನ ಜನತೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಹೊಸ ಮೆಡಿಕಲ್‌ ಕಾಲೇಜ್‌ ಸ್ಥಾಪಿಸಲಾಗುವುದೆಂದು ಘೋಷಿಸುವುದರ ಮುಖೇನ ಸಿಹಿ ಸುದ್ದಿಯನ್ನು ನೀಡಿದ್ದಾರೆ.

ಬಜೆಟ್ ಘೋಷಣೆಯಾಗುತ್ತಿದಂತೆ ಪುತ್ತೂರಿನಿಂದ ತೆರಳಿದ್ದ ಕಾಂಗ್ರೆಸ್‌ ಕಾರ್ಯಕರ್ತರು, ಮೆಡಿಕಲ್‌ ಕಾಲೇಜ್‌ ಹೋರಾಟ ಸಮಿತಿಯ ಪದಾಧಿಕಾರಿಗಳು ಹಾಗೂ ಅವರ ಜತೆ ತೆರಳಿದ್ದ ಬ್ಯಾಂಡ್‌ ವಾದನದ ತಂಡವು ಸಂಭ್ರಮದಿಂದ ಕುಣಿದು ಕುಪ್ಪಳಿಸಿತು. ಅಷ್ಟೇ ಅಲ್ಲದೆ ಶಾಸಕ ಅಶೋಕ್‌ ರೈಯವರನ್ನು ಹೆಗಲ ಮೇಲೆ ಹೊತ್ತುಕೊಂಡು ಸಂಭ್ರಮಿಸಿದರು. ಅಷ್ಟೇ ಅಲ್ಲದೆ ಅಶೋಕ್ ರೈಯವರು ಕೂಡ ಬ್ಯಾಂಡ್‌ ಸದ್ದಿಗೆ ಹೆಜ್ಜೆ ಹಾಕಿ ಸಂಭ್ರಮಿಸಿದರು

ಈ ಸಂದರ್ಭದಲ್ಲಿ ಪುತ್ತೂರು ಶ್ರೀಮಹಾಲಿಂಗೇಶ್ವರ ದೇವಸ್ಥಾನದ  ವ್ಯವಸ್ಥಾಪನ ಮಂಡಳಿ ಅಧ್ಯಕ್ಷ  ಪಂಜಿಗುಡ್ಡೆ ಈಶ್ವರ ಭಟ್‌, ಹೋರಾಟ ಸಮಿತಿಯ ಅಮಳ ರಾಮಚಂದ್ರ, ಕಾಂಗ್ರೆಸ್‌ ಮುಖಂಡರಾದ ಶಿವರಾಮ ಆಳ್ವ, ಎಂ ಎಸ್‌ ಮಹಮ್ಮದ್‌, ಕಾವು ಹೇಮಾನಾಥ ಶೆಟ್ಟಿ, ಕೃಷ್ಣ ಪ್ರಸಾದ್‌ ಆಳ್ವ ಮುಂತಾದವರು ಉಪಸ್ಥಿತರಿದ್ದರು

- Advertisement -

Latest News

error: Content is protected !!