Sunday, June 7, 2026
Homeತಾಜಾ ಸುದ್ದಿನೀರಿನಲ್ಲಿ ಯೋಗ ಮಾಡುತ್ತಿರುವಾಗಲೇ ಯೋಗ ಪಟು ಸಾವು

ನೀರಿನಲ್ಲಿ ಯೋಗ ಮಾಡುತ್ತಿರುವಾಗಲೇ ಯೋಗ ಪಟು ಸಾವು

- Advertisement -
- Advertisement -

ಚಾಮರಾಜನಗರ:ನೀರಿನಲ್ಲಿ ಯೋಗ ಮಾಡುತ್ತಿರುವಾಗಲೇ ಯೋಗ ಪಟು ಸಾವನ್ನಪ್ಪಿರುವ ಘಟನೆ ಕೊಳ್ಳೇಗಾಲದ ದಾಸನಪುರ ಬಳಿಯ ಕಾವೇರಿ ನದಿಯಲ್ಲಿ ನಡೆದಿದೆ.


ಮೃತರನ್ನು ಕೊಳ್ಳೇಗಾಲದ ಯೋಗಪಟು ನಾಗರಾಜ್​ (78) ಮೃತ ವ್ಯಕ್ತಿ.  ನಾಗರಾಜ್ ತೀರ್ಥ ಸ್ನಾನ ಮಾಡಲೆಂದು ನಾಗರಾಜ್​ ಕಾವೇರಿ ನದಿಗೆ ಇಳಿದಿದ್ದರು. ನಾಗರಾಜ್​ ನದಿ ನೀರಿನಲ್ಲಿ ತೇಲುತ್ತಾ ಯೋಗ ಮಾಡುತ್ತಿದ್ದರು. ಎಷ್ಟು ಹೊತ್ತಾದರೂ ನಾಗರಾಜು ತೇಲುವ ಸ್ಥಿತಿಯಲ್ಲೇ ಇದ್ದರು. ಅನುಮಾನಗೊಂಡು ಹತ್ತಿರ ಹೋಗಿ ನೋಡಿದಾಗ ನಾಗರಾಜ್​ ಮೃತಪಟ್ಟಿದ್ದರು. ಕೊಳ್ಳೇಗಾಲ ಪಟ್ಟಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

Latest News

error: Content is protected !!