Sunday, June 7, 2026
Homeಅಪರಾಧಬಾಲಕಿಯ ಅಪಹರಿಸಿ ಸಾಮೂಹಿಕ ಅತ್ಯಾಚಾರ ಪ್ರಕರಣ: ಮೂವರಿಗೆ 20 ವರ್ಷ ಜೈಲು,1.65 ಲ.ರೂ. ದಂಡ: ಪೊಕ್ಸೋ...

ಬಾಲಕಿಯ ಅಪಹರಿಸಿ ಸಾಮೂಹಿಕ ಅತ್ಯಾಚಾರ ಪ್ರಕರಣ: ಮೂವರಿಗೆ 20 ವರ್ಷ ಜೈಲು,1.65 ಲ.ರೂ. ದಂಡ: ಪೊಕ್ಸೋ ವಿಶೇಷ ನ್ಯಾಯಾಲಯದಿಂದ ಆದೇಶ

- Advertisement -
- Advertisement -

ಮಂಗಳೂರು: ಅಪ್ರಾಪ್ತ ವಯಸ್ಕ ಬಾಲಕಿಯನ್ನು 2021ರ ಡಿ. 7ರಂದು ತೊಕ್ಕೊಟ್ಟು ಬಸ್ಸು ತಂಗುದಾಣದ ಬಳಿಯಿಂದ ಮೊಬೈಲ್‌ ಮತ್ತು ಹೊಸ ಬಟ್ಟೆಗಳನ್ನು ತೆಗೆದುಕೊಡುವುದಾಗಿ ಆಮಿಷವೊಡ್ಡಿ ಅಪಹರಿಸಿ ಗಾಂಜಾ ಹಾಗೂ ಬಿಯರ್ ಕುಡಿಸಿ ಸಾಮೂಹಿಕ ಅತ್ಯಾಚಾರವೆಸಗಿದ ಮೂವರಿಗೆ 20 ವರ್ಷಗಳ ಜೈಲು ಶಿಕ್ಷೆ ಮತ್ತು 1,65,000 ರೂ. ದಂಡ ವಿಧಿಸಿ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ, ಎಫ್‌.ಟಿ.ಎಸ್‌.ಸಿ-2 ಪೊಕ್ಸೋ ವಿಶೇಷ ನ್ಯಾಯಾಲಯ ಆದೇಶ ಹೊರಡಿಸಿದೆ.

ಅತ್ಯಾಚಾರ ಪ್ರಕಾರನದಲ್ಲಿ ಶಿಕ್ಷೆಗೆ ಒಳಗಾದವರು ಮಂಗಳೂರು ತಾಲೂಕು ಮೂಳೂರು ಗ್ರಾಮ ಕಿನ್ನಿಕಂಬಳ ಮಸೀದಿ ಹತ್ತಿರದ ನಿವಾಸಿ ಮೊಹಮ್ಮದ್‌ ಶಾಕೀರ್‌ ಅಲಿಯಾಸ್‌ ಸಾಕೀರ್‌ ಅಲಿಯಾಸ್‌ ಶಾಕೀರ್‌ (26), ಬಂಟ್ವಾಳ ತಾಲೂಕು ಕೈಕಂಬ ನಿವಾಸಿ ಅಭಿಜಿತ್‌ ಅಲಿಯಾಸ್‌ ಅಭಿ (27) ಮತ್ತು ಕಾರ್ಕಳ ತಾಲೂಕಿನ ಕುಕ್ಕುಂದೂರು ಬಂಗ್ಲೆ ಗುಡ್ಡೆ ನಿವಾಸಿ ಅಬ್ದುಲ್‌ ಸಮದ್‌ ಅಲಿಯಾಸ್‌ ಸಮದ್‌ (32) ಎಂದು ತಿಳಿದು ಬಂದಿದೆ.

ಈ ಬಗ್ಗೆ ಯಾರಿಗಾದರೂ ತಿಳಿಸಿದರೆ ಕೊಲೆ ಮಾಡುವುದಾಗಿ ಬೆದರಿಕೆ ಒಡ್ಡಿದ್ದರು. ಈ ಬಗ್ಗೆ ಉಳ್ಳಾಲ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಉಳ್ಳಾಲ ಪೊಲೀಸ್‌ ನಿರೀಕ್ಷಕರಾಗಿದ್ದ ಸಂದೀಪ್‌ ಜಿ.ಎಸ್‌. ಅವರು ತನಿಖೆ ಪೂರ್ಣಗೊಳಿಸಿ ಆರೋಪಿತರ ವಿರುದ್ಧ ದೋಷಾರೋಪಣೆ ಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದರು.ಗಾಂಜಾ ವಶ; ಸೇವನೆ ದೃಢಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ, ಎಫ್‌.ಟಿ.ಎಸ್‌.ಸಿ-2 ಪೊಕ್ಕೋ ವಿಶೇಷ ನ್ಯಾಯಾಲಯದಲ್ಲಿ ವಿಚಾರಣೆ ನಡೆದಿದ್ದು, ಈ ಪ್ರಕರಣದಲ್ಲಿ ಅಭಿಯೋಜನೆ ಪರ ಒಟ್ಟು 15 ಸಾಕ್ಷಿದಾರರ ವಿಚಾರಣೆ ಮತ್ತು 50 ದಾಖಲೆಗಳನ್ನು ಗುರುತಿಸಲಾಗಿದೆ.

ಈ ಪ್ರಕರಣದಲ್ಲಿ ನೊಂದ ಬಾಲಕಿಯ ತಾಯಿ ನೀಡಿದ ದೂರಿನನ್ವಯ ಪೊಲೀಸರು ರಕ್ಷಿಸಿದ್ದರು. ಬಾಲಕಿ ಮತ್ತು ಯುವಕರನ್ನು ವೈದ್ಯಕೀಯ ತಪಾಸಣೆಗೆ ಒಳಪಡಿಸಿದಾಗ ಗಾಂಜಾ ಸೇವನೆ ಮಾಡಿರುವುದು ಕಂಡುಬಂದಿದೆ.

- Advertisement -

Latest News

error: Content is protected !!