Sunday, June 7, 2026
Homeಅಪರಾಧತರಕಾರಿ ಅಂಗಡಿಗೆ ನುಗ್ಗಿ ಶಾಲೆಗಿಟ್ಟಿದ ಕಾಣಿಕೆ ಹುಂಡಿಯನ್ನು ದೋಚಿದ ಕಳ್ಳರು

ತರಕಾರಿ ಅಂಗಡಿಗೆ ನುಗ್ಗಿ ಶಾಲೆಗಿಟ್ಟಿದ ಕಾಣಿಕೆ ಹುಂಡಿಯನ್ನು ದೋಚಿದ ಕಳ್ಳರು

- Advertisement -
- Advertisement -

ಮೆಲ್ಕಾರ್ ನ ತರಕಾರಿ ಅಂಗಡಿಗೆ ನುಗ್ಗಿ ಸರಕಾರಿ ಶಾಲೆಯ ಅಭಿವೃದ್ಧಿಗಾಗಿ ಇಟ್ಟಿದ್ದ ನಗದಿನ ಪೆಟ್ಟಿಗೆಯನ್ನು ದೋಚಿದ ಘಟನೆ ಜ. 31 ಶುಕ್ರವಾರದಂದು ನಡೆದಿದೆ.

ಚಂದ್ರಿಕಾ ಎನ್ನುವ ಮಹಮ್ಮದ್ ಶರೀಫ್ ಎಂಬವರ ಮಾಲಕತ್ವದ ಅಂಗಡಿಯ ಬೇಗ ಮುರಿದು ಹಣಕ್ಕಾಗಿ ಕಳ್ಳರು ಜಾಲಾಡಿದ್ದರೆ ಎನ್ನಲಾಗಿದೆ.

ಸಾಮಾಜಿಕ ಸೇವಾ ಕಾರ್ಯಕರ್ತರಾಗಿರುವ ಶರೀಫ್ ಅವರು ಸರಕಾರಿ ಶಾಲೆಯ ಅಭಿವೃದ್ಧಿಗಾಗಿ ಕಾಣಿಕೆ ಹುಂಡಿಯನ್ನು ತಮ್ಮ ಅಂಗಡಿಯಲ್ಲಿಟ್ಟಿದ್ದು, ಈಗಾಗಲೇ 5 ಸಾವಿರಕ್ಕಿಂತಲೂ ಅಧಿಕ ಮೊತ್ತ ಅದರಲ್ಲಿತ್ತು ಎನ್ನಲಾಗಿದೆ. ಇನ್ನು ಘಟನೆಯು ಸಿಸಿ ಕ್ಯಾಮೆರಾದಲ್ಲಿ ದಾಖಲಾಗಿದೆ. ಘಟನೆಯ ಕುರಿತ ಹೆಚ್ಚಿನ ಮಾಹಿತಿ ಇನ್ನಷ್ಟೇ ತಿಳಿದು ಬರಬೇಕಿದೆ.

- Advertisement -

Latest News

error: Content is protected !!