Thursday, June 4, 2026
Homeಕರಾವಳಿಕಡಬ: ಅಕ್ರಮವಾಗಿ ಗೋ ಸಾಗಾಟ ಮಾಡುತ್ತಿದ್ದ ವಾಹನವನ್ನು ತಡೆದ ಹಿಂದೂ ಕಾರ್ಯಕರ್ತರು; ಒಂದು ದನ ಸಾವು

ಕಡಬ: ಅಕ್ರಮವಾಗಿ ಗೋ ಸಾಗಾಟ ಮಾಡುತ್ತಿದ್ದ ವಾಹನವನ್ನು ತಡೆದ ಹಿಂದೂ ಕಾರ್ಯಕರ್ತರು; ಒಂದು ದನ ಸಾವು

- Advertisement -
- Advertisement -

ಕಡಬ: ಅಕ್ರಮವಾಗಿ ಗೋ ಸಾಗಾಟ ಮಾಡುತ್ತಿದ್ದ ವಾಹನವನ್ನು ಹಿಂದೂ ಕಾರ್ಯಕರ್ತರು ತಡೆದು ಪೊಲೀಸರಿಗೆ ಒಪ್ಪಿಸಿದ ಘಟನೆ ಕಡಬ ಠಾಣಾ ವ್ಯಾಪ್ತಿಯ ಕೊಯಿಲ ಬಳಿ ನಡೆದಿದೆ. ವಾಹನದಲ್ಲಿದ್ದ ಒಂದು ದನ ಸಾವನ್ನಪ್ಪಿದೆ.

ಜ.14 ಮುಂಜಾನೆ ಘಟನೆ ನಡೆದಿದ್ದು ಪಿಕಪ್ ವಾಹನದಲ್ಲಿ ಸುಮಾರು ಎಂಟು ಜಾನುವಾರುಗಳಿದ್ದು ಒಂದು ದನ ಮೃತಪಟ್ಟಿದೆ ಎನ್ನಲಾಗಿದೆ. ಈ ಜಾನುವಾರುಗಳನ್ನು ಹಿಂಸಾತ್ಮಕ ರೀತಿಯಲ್ಲಿ ಹಗ್ಗದಿಂದ ಕಟ್ಟಲಾಗಿತ್ತು. ಕಡಬ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದಲ್ಲದೆ ಅಕ್ರಮ ಜಾನುವಾರು ಸಾಗಾಟಕ್ಕೆ ಬಳಸಿದ ವಾಹನವನ್ನು ವಶಕ್ಕೆ ಪಡೆದು ಠಾಣೆಗೆ ಕೊಂಡೊಯ್ದಿದ್ದಾರೆ

- Advertisement -

Latest News

error: Content is protected !!