ಪುತ್ತೂರು: ಇಲ್ಲಿನ ಮಾಜಿ ಸೈನಿಕರ ಭವನದಲ್ಲಿ ನಡೆದ ಸಿಐಟಿಯು ಸಂಯೋಜಿತ ಪುತ್ತೂರು ತಾಲ್ಲೂಕು ಆಶಾ ಕಾರ್ಯಕರ್ತೆಯರ ಸಮಾವೇಶದಲ್ಲಿ ಆಶಾ ಕಾರ್ಯಕರ್ತೆಯರ ವೇತನ ಹೆಚ್ಚಳ ಸೇರಿದಂತೆ ಪ್ರಮುಖ ಬೇಡಿಕೆಗಳ ಈಡೇರಿಸುವಂತೆ ಈಗಾಗಲೇ ಆರೋಗ್ಯ ಸಚಿವರಿಗೆ ಮನವಿ ಸಲ್ಲಿಸಲಾಯಿತು.
ಒಂದು ವೇಳೆ ಈ ಮನವಿಗೆ ಸ್ಪಂದನೆ ಸಿಗದಿದ್ದರೆ ಜನವರಿಯಲ್ಲಿ ಜಿಲ್ಲಾ ಮಟ್ಟದ ಹೋರಾಟ ನಡೆಸಲು ಸಿದ್ಧರಾಗಬೇಕಾಗುತ್ತದೆ ಎಂದು ಸಿಐಟಿಯು ಜಿಲ್ಲಾ ಘಟಕದ ಉಪಾಧ್ಯಕ್ಷ, ವಕೀಲ ಬಿ.ಎಂ.ಭಟ್ ತಿಳಿಸಿದರು.
ಅಧ್ಯಕ್ಷರಾಗಿ ಚಂದ್ರಾವತಿ ಡಿ.ಆರ್., ಉಪಾಧ್ಯಕ್ಷರಾಗಿ ಸುಲೋಚನಾ, ಪ್ರಧಾನ ಕಾರ್ಯದರ್ಶಿಯಾಗಿ ತುಳಸಿ, ಸಹಕಾರ್ಯದರ್ಶಿಯಾಗಿ ಸಾವಿತ್ರಿ, ಖಜಾಂಜಿಯಾಗಿ ಪ್ರಮೀಳಾ ಸರ್ವೆ, ಸಲಹೆಗಾರರಾಗಿ ಪಿ.ಕೆ.ಸತೀಶನ್, ಬಿ.ಎಂ.ಭಟ್, ಸದಸ್ಯರಾಗಿ ಬೇಬಿ, ಜಯಲತ, ಉಷಾ ಅವರನ್ನು ಆಯ್ಕೆ ಮಾಡಲಾಯಿತು.
ಪುತ್ತೂರು ತಾಲ್ಲೂಕು ಸಿಐಟಿಯು ಅಕ್ಷರದಾಸೋಹ ನೌಕರರ ಸಂಘದ ಅಧ್ಯಕ್ಷ, ವಕೀಲ ಪಿ.ಕೆ.ಸತೀಶನ್, ಸಿಐಟಿಯು ನಾಯಕಿ ಈಶ್ವರಿ, ಕಡಬ ತಾಲ್ಲೂಕು ಆಶಾ ನೌಕರರ ಸಂಘದ ಅಧ್ಯಕ್ಷೆ ಆಶಾ ಎನ್ ಉಪಸ್ಥಿತರಿದ್ದರು.


