Wednesday, June 3, 2026
Homeಕರಾವಳಿಸಿಟಿ ಸೆಂಟರ್ ಬಳಿ ಹೊತ್ತಿ ಉರಿದ ಕಾರು; ಅವಘಡದಿಂದ ಮಹಿಳೆ ಪಾರು

ಸಿಟಿ ಸೆಂಟರ್ ಬಳಿ ಹೊತ್ತಿ ಉರಿದ ಕಾರು; ಅವಘಡದಿಂದ ಮಹಿಳೆ ಪಾರು

- Advertisement -
- Advertisement -

ಮಂಗಳೂರು: ಇಲ್ಲಿನ ಸಿಟಿ ಸೆಂಟರ್ ಸಮೀಪದಲ್ಲಿ ನಿಲ್ಲಿಸಿದ್ದ ಕಾರು ಬೆಂಕಿಗಾಹುತಿಯಾಗಿರುವ ಘಟನೆ ಡಿ.16 ಸೋಮವಾರದಂದು ಬೆಳಿಗ್ಗೆ ಸಂಭವಿಸಿದೆ.

ಬೆಂಕಿಗೆ ಆಹುತಿಯಾದ ಕಾರನ್ನು ಮಹಿಳೆಯೊಬ್ಬರು ಚಲಾಯಿಸುತ್ತಿದ್ದು, ಈ ಕಾರನ್ನು ಸಿಟಿ ಸೆಂಟರ್ ಬಳಿ ಇರುವಂತಹ ಫ್ಲಾಟ್ ಬಳಿ ನಿಲ್ಲಿಸಿದ ವೇಳೆ ಆಕಸ್ಮಿಕವಾಗಿ ಕಾರಿನಲ್ಲಿ ಹೊಗೆ ಕಾಣಿಸಿಕೊಂಡಿದೆ. ಇದಾದ ಕೆಲವೇ ಹೊತ್ತಿನಲ್ಲಿ ಕಾರು ಬೆಂಕಿಗಾಹುತಿಯಾಗಿದೆ ಎಂದು ಹೇಳಲಾಗಿದೆ. 

ಘಟನೆ ನಡೆಯುತ್ತಿದ್ದಂತೆ ಸ್ಥಳೀಯರು ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದ್ದು, ಸ್ಥಳಕ್ಕೆ ಬಂದ ಅಗ್ನಿಶಾಮಕ ತಂಡ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಈ ಘಟನೆಯಲ್ಲಿ ಯಾವುದೇ ಅಹಿತಕರ ಹಾನಿ ಸಂಭವಿಸಿಲ್ಲ ಎನ್ನಲಾಗಿದೆ. ಇಂತಹ ಘಟನೆಗಳು ಇತ್ತೀಚೆಗೆ ಮಂಗಳೂರಿನ ಲೇಡಿಹಿಲ್, ಕದ್ರಿ, ಅಡ್ಯಾರ್ ಮತ್ತು ಸುರತ್ಕಲ್ ಗಳಲ್ಲಿ ಕೂಡ ಸಂಭವಿಸಿತ್ತು. 

- Advertisement -

Latest News

error: Content is protected !!