Thursday, June 4, 2026
Homeಕರಾವಳಿಉಡುಪಿಹಿಂದೂ ಹಿತರಕ್ಷಣೆ ಸಮಿತಿಯಿಂದ ಪ್ರತಿಭಟನೆ; ಹಿಂದೂಗಳು ಬುಸುಗುಡಲು ಆರಂಭಿಸಿದಾಗ ಮಾತ್ರ ಎಲ್ಲವೂ ಸರಿಯಾಗುತ್ತದೆ; ಪುತ್ತಿಗೆ ಶ್ರೀ

ಹಿಂದೂ ಹಿತರಕ್ಷಣೆ ಸಮಿತಿಯಿಂದ ಪ್ರತಿಭಟನೆ; ಹಿಂದೂಗಳು ಬುಸುಗುಡಲು ಆರಂಭಿಸಿದಾಗ ಮಾತ್ರ ಎಲ್ಲವೂ ಸರಿಯಾಗುತ್ತದೆ; ಪುತ್ತಿಗೆ ಶ್ರೀ

- Advertisement -
- Advertisement -

ಉಡುಪಿ: ಇಲ್ಲಿನ ಹಿಂದೂ ಹಿತರಕ್ಷಣ ಸಮಿತಿಯಿಂದ ಬಾಂಗ್ಲಾದಲ್ಲಿ ಅಲ್ಪಸಂಖ್ಯಾಕ ಹಿಂದೂಗಳ ಮೇಲೆ ನಡೆಯುತ್ತಿರುವ ದೌರ್ಜನ್ಯ ಹಾಗೂ ಇಸ್ಕಾನ್‌ ಮುಖಂಡರನ್ನು ಬಂಧಿಸಿರುವುದನ್ನು ಖಂಡಿಸಿ ಬುಧವಾರದಂದು ಜೋಡುಕಟ್ಟೆಯಿಂದ ಶ್ರೀ ಕೃಷ್ಣಮಠದ ಪಾರ್ಕಿಂಗ್‌ ಪ್ರದೇಶದ ವರೆಗೂ ಬೃಹತ್‌ ಪ್ರತಿಭಟನ ಮೆರವಣಿಗೆ ನಡೆಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಪರ್ಯಾಯ ಶ್ರೀ ಪುತ್ತಿಗೆ ಮಠಾಧೀಶರಾದ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರು, ‘ಹಿಂದೂಗಳು ಮಲಗಿದ ಹೆಬ್ಬಾವಿನಂತಾಗಿದ್ದಾರೆ. ಆದರೆ ಮಲಗಿದ ಹೆಬ್ಬಾವಿನ ಮೇಲೆ ಯಾವಾಗ ಕಲ್ಲು ಬಿಳುತ್ತೋ, ಆ ಅನಂತರವೇ ಹೆಬ್ಬಾವು ಎಚ್ಚೆತ್ತುಕೊಳ್ಳುವುದು. ಕಲ್ಲು ಹೊಡೆದವರು ಕೂಡ ಭಯಪಡುವುದು ಆಗಲೇ. ಹಿಂದೂಗಳು ಕೂಡ ಎಚ್ಚೆತ್ತ ಹೆಬ್ಬಾವುಗಳಂತೆ ಆಗಬೇಕು. ಬುಸುಗುಡಲು ಆರಂಭಿಸಿದಾಗ ಮಾತ್ರ ಎಲ್ಲವೂ ಸರಿಯಾಗುವುದು,’ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಧರ್ಮ ಜಾಗರಣದ ಪ್ರಮುಖರಾದ ರವೀಂದ್ರ ಪುತ್ತೂರು, ಜಿಲ್ಲಾ ಅಯ್ಯಪ್ಪಸ್ವಾಮಿ ಸಂಘಟನೆಯ ಗೋಪಾಲ ಗುರುಸ್ವಾಮಿ, ಜಿಲ್ಲೆಯ ಶಾಸಕರು, ಬಿಜೆಪಿ ಹಾಗೂ ಹಿಂದೂ ಸಂಘಟನೆಗಳ ಪ್ರಮುಖರು ಉಪಸ್ಥಿತರಿದ್ದರು. ಶ್ರೀನಿಧಿ ಹೆಗ್ಡೆ ರಾಷ್ಟ್ರಪತಿಗಳಿಗೆ ಸಲ್ಲಿಸುವ ಮನವಿ ಪತ್ರ ವಾಚನ ಮಾಡಿದರು. ಕುತ್ಯಾರು ಪ್ರಸಾದ್‌ ಶೆಟ್ಟಿ ನಿರೂಪಿಸಿದರು.

- Advertisement -

Latest News

error: Content is protected !!