Thursday, June 4, 2026
Homeಕರಾವಳಿನಗರದ ಲೇಡಿಗೋಷನ್ ಆಸ್ಪತ್ರೆಯಲ್ಲಿ ಮಗು ಮಾರಾಟ ವದಂತಿ; ಸಾಮಾಜಿಕ ಜಾಲತಾಣದಲ್ಲಿ ಪತ್ರವೊಂದು ವೈರಲ್; ಸುಳ್ಳು ವದಂತಿಗೆ ಸ್ಪಷ್ಟನೆ...

ನಗರದ ಲೇಡಿಗೋಷನ್ ಆಸ್ಪತ್ರೆಯಲ್ಲಿ ಮಗು ಮಾರಾಟ ವದಂತಿ; ಸಾಮಾಜಿಕ ಜಾಲತಾಣದಲ್ಲಿ ಪತ್ರವೊಂದು ವೈರಲ್; ಸುಳ್ಳು ವದಂತಿಗೆ ಸ್ಪಷ್ಟನೆ ನೀಡಿದ ವೈದ್ಯಕೀಯ ಅಧೀಕ್ಷಕರು

- Advertisement -
- Advertisement -

ಮಂಗಳೂರು: ಸಾಮಾಜಿಕ ಜಾಲತಾಣದಲ್ಲಿ ನಗರದ ಲೇಡಿಗೋಷನ್ ಆಸ್ಪತ್ರೆಯಲ್ಲಿ ಹೆರಿಗೆಯಾದ ಮಹಿಳೆಯೊಬ್ಬರ ಮಗುವನ್ನು ಅಲ್ಲಿನ ಸಿಬಂದಿ ಮಾರಾಟ ಮಾಡಿದ್ದಾರೆ ಎನ್ನುವ ಪತ್ರ ವೈರಲ್ ಆಗಿತ್ತು. ಇದೀಗ ಈ ಪತ್ರಕ್ಕೆ ಲೇಡಿಗೋಷನ್ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕರು ಸ್ಪಷ್ಟನೆ ನೀಡಿದ್ದಾರೆ. 

ಭವ್ಯ ಎನ್ನುವ ಮಹಿಳೆಯು ತನ್ನ ಶಿಶುವನ್ನು ಸರಕಾರಿ ಲೇಡಿಗೋಶನ್ ಆಸ್ಪತ್ರೆಯ ಸಿಬ್ಬಂದಿ ಮಾರಾಟ ಮಾಡಿದ್ದಾರೆ ಎನ್ನುವ ಮಾನಹಾನಿಕರ ಹೇಳಿಕೆಯನ್ನು ಸಾಮಾಜಿಕ ಮಾಧ್ಯಮದಲ್ಲಿ ಬಿತ್ತರಿಸಿ, ಸಮಾಜದಲ್ಲಿ ಗೊಂದಲದ ವಾತಾವರಣವನ್ನು ಸೃಷ್ಟಿ ಮಾಡುತ್ತಿದ್ದಾರೆ. ಭವ್ಯಾ ಅವರ ಶಿಶುವು ದ.ಕ.ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಸುಪರ್ದಿಯಲ್ಲಿದೆ ಎಂದು ವೈದ್ಯಕೀಯ ಅಧೀಕ್ಷಕರು ತಿಳಿಸಿದ್ದಾರೆ

ಸರಕಾರಿ ಸ್ವಾಮ್ಯದ ಲೇಡಿಗೋಶನ್ ಆಸ್ಪತ್ರೆಯು ಹೆರಿಗೆ ಮತ್ತು ಸ್ತ್ರೀರೋಗ ಸಂಬಂಧ ವಿಚಾರದಲ್ಲಿ ಅತ್ಯುತ್ತಮ ಸೇವೆಯನ್ನು ಸಲ್ಲಿಸುತ್ತಾ ಬಂದಿದ್ದು, ಇದು ಆಸ್ಪತ್ರೆಗೆ ಕಳಂಕವನ್ನು ತರುವ ವಿಚಾರವಾಗಿದೆ. ಈ ಕುರಿತಂತೆ ನಾವು ನ್ಯಾಯಾಲಯದ ತೀರ್ಪನ್ನು ನಿರೀಕ್ಷಿಸುತ್ತಿದ್ದೇವೆ ಎಂದು ಅಧೀಕ್ಷಕರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

ಪ್ರಕರಣದ ವಿವರ: ಸರಕಾರಿ ಲೇಡಿಗೋಷನ್ ಆಸ್ಪತ್ರೆಯಲ್ಲಿ ಭವ್ಯಾ ಆ.18ರಂದು ಬೆಳಗ್ಗೆ 9.58ಕ್ಕೆ ಹೆಣ್ಣು ಮಗುವಿಗೆ ಜನ್ಮ ನೀಡಿದರು. ತಜ್ಞರು ಮಗುವಿಗೆ ಒಂದು ಕಣ್ಣು ಗುಡ್ಡೆ ಇಲ್ಲದಿರುವುದನ್ನು ತಿಳಿಸಿದ ಸಂದರ್ಭ ಆ ಶಿಶು ತನ್ನದಲ್ಲವೆಂದು ಆಕೆ ನಿರಾಕರಿಸಿದ್ದರು. ತನ್ನ ಮಗುವನ್ನು ಆಸ್ಪತ್ರೆಯ ಸಿಬ್ಬಂದಿ ಅದಲು ಬದಲು ಮಾಡಿರುತ್ತಾರೆ ಎಂದು ಸುಳ್ಳು ಆರೋಪವನ್ನು ಹೊರಿಸಿದ್ದರು ಎನ್ನಲಾಗಿದೆ. ಇನ್ನು ಪೊಲೀಸ್‌ ತನಿಖೆ ನಡೆದು ನ್ಯಾಯಾಧೀಶರ ಉಪಸ್ಥಿತಿಯಲ್ಲಿ ಡಿಎನ್‌ಎ ಪರೀಕ್ಷೆ ಪರೀಕ್ಷೆಯನ್ನು ನಡೆಸಲಾಗಿದೆ. ಇನ್ನು ಸಂಬಂಧಿಕರು ನೇರವಾಗಿ ನ್ಯಾಯಾಲಯಕ್ಕೆ ಡಿಎನ್ಎ ಪರೀಕ್ಷೆಯ ವರದಿಯನ್ನು ತನಿಖಾಧಿಕಾರಿಗಳ ಮೂಲಕ ನೀಡಿದ್ದರು ಎನ್ನಲಾಗಿದೆ.

- Advertisement -

Latest News

error: Content is protected !!