- Advertisement -
- Advertisement -
ಸುಳ್ಯ: ರಬ್ಬರ್ ಟ್ಯಾಪಿಂಗ್ ಮಾಡುತ್ತಿದ್ದಾಗ ಮಹಿಳೆ ಮೇಲೆ ಕಾಡು ಹಂದಿ ದಾಳಿ ಮಾಡಿದ ಪರಿಣಾಮ ಮಹಿಳೆ ಗಾಯಗೊಂಡಿರುವ ಘಟನೆ ದುಗ್ಗಲಡ್ಕದಲ್ಲಿ ಇಂದು ಬೆಳಗ್ಗೆ ನಡೆದಿದೆ.
ಕೂಟೇಲು ಸಿಆರ್ ಸಿ ಯ ಅಂಬಿಕಾ ಎಂಬವರು ರಬ್ಬರ್ ತೋಟದಲ್ಲಿ ಬೆಳಗ್ಗೆ ಸುಮಾರು 7 ಗಂಟೆ ಹೊತ್ತಿಗೆ ಟ್ಯಾಪಿಂಗ್ ನಡೆಸುತ್ತಿದ್ದರು. ಈ ವೇಳೆ ಪೊದೆಗಳ ಮಧ್ಯೆಯಿದ್ದ ಕಾಡುಹಂದಿಯೊಂದು ಏಕಾಏಕಿ ಬಂದು ಬಂದು ಅಂಬಿಕಾ ಅವರ ಮೇಲೆ ದಾಳಿ ಮಾಡಿದೆ.
ಪರಿಣಾಮ ಅಂಬಿಕಾ ಅವರ ಕಾಲಿಗೆ ಗಾಯವಾಗಿದ್ದು,ತಕ್ಷಣ ಸುಳ್ಯದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
- Advertisement -