Wednesday, June 3, 2026
Homeಕರಾವಳಿಮಂಗಳೂರುಬೆಳ್ತಂಗಡಿ :ಹಾಸನದಲ್ಲಿ ವೇಣೂರು ಪೊಲೀಸರ ಬಲೆಗೆ ಬಿದ್ದ ಒಂದೂವರೆ ವರ್ಷದಿಂದ ತಲೆಮರೆಸಿಕೊಂಡಿದ್ದ ಆರೋಪಿ

ಬೆಳ್ತಂಗಡಿ :ಹಾಸನದಲ್ಲಿ ವೇಣೂರು ಪೊಲೀಸರ ಬಲೆಗೆ ಬಿದ್ದ ಒಂದೂವರೆ ವರ್ಷದಿಂದ ತಲೆಮರೆಸಿಕೊಂಡಿದ್ದ ಆರೋಪಿ

- Advertisement -
- Advertisement -

ಬೆಳ್ತಂಗಡಿ : ಚೆಕ್ ಬೌನ್ಸ್ ಪ್ರಕರಣದಲ್ಲಿ ಬೆಳ್ತಂಗಡಿ ನ್ಯಾಯಾಲಯಕ್ಕೆ ಸುಮಾರು 1.5 ವರ್ಷಗಳಿಂದ ತಲೆ ಮರೆಸಿಕೊಂಡಿದ್ದ ವಾರಂಟ್ ಆರೋಪಿ ಬೆಳ್ತಂಗಡಿ ತಾಲೂಕಿನ ಬಳಂಜ ಗ್ರಾಮದ ನಿವಾಸಿ ಯೂಸುಫ್ ಮಗನಾದ ಅಶ್ರಫ್ @ ಏರಟೆಲ್ ಅಶ್ರಫ್ (37)ಎಂಬತನನ್ನು ಬೆಳ್ತಂಗಡಿ ಸರ್ಕಲ್‌ ಇನ್ಸ್ಪೆಕ್ಟರ್ ನಾಗೇಶ್ ಕದ್ರಿ ಮಾರ್ಗದರ್ಶನದಲ್ಲಿ ವೇಣೂರು ಪೊಲೀಸ್ ಠಾಣೆಯ ಉಪ-ನಿರೀಕ್ಷಕರು ಶ್ರೀಶೈಲ ಡಿ ಮುರಗೋಡ ಮತ್ತು ಆನಂದ ರವರ ನೇತೃತ್ವದ ಸಿಬ್ಬಂದಿ ಬಸವರಾಜ್ ರವರು ಹಾಸನ ಜಿಲ್ಲೆಯ ಅರಸೀಕೆರೆಯಿಂದ ವಶಕ್ಕೆ ಪಡೆದುಕೊಂಡು ಬೆಳ್ತಂಗಡಿ ನ್ಯಾಯಾಲಯ ಕರ್ತವ್ಯದ ಸಿಬ್ಬಂದಿ ನಿಕೋಲಸ್ ಪಿಂಟೋ ರವರೊಂದಿಗೆ ಮಾನ್ಯ ಬೆಳ್ತಂಗಡಿ ನ್ಯಾಯಧೀಶರ ಮುಂದೆ ಹಾಜರುಪಡಿಸಿದ್ದು ನ್ಯಾಯಾಲಯವು ಸೂಕ್ತ ಜಾಮೀನಿನಲ್ಲಿ ಬಿಡುಗಡೆ ಮಾಡಿರುತ್ತಾರೆ.


ಸದ್ರಿ ಆರೋಪಿ ದಸ್ತಗಿರಿಗೆ ಬೆಳ್ತಂಗಡಿ ಪೊಲೀಸ್ ಠಾಣಾ ಸಿಬ್ಬಂದಿಗಳಾದ ಬೆಣ್ಣೀಚನ್, ಚರಣರಾಜ್ ಮತ್ತು ಗಿರೀಶ್ ಕುಮಾರ್ ರವರು ಸಹಕರಿಸಿರುತ್ತಾರೆ.

- Advertisement -

Latest News

error: Content is protected !!