- Advertisement -
![]()
- Advertisement -
ಬಂಟ್ವಾಳ: ಕಾರ್ಮಿಕನೋರ್ವ ಅಡಿಕೆ ಮರ ಹತ್ತಿ ಅಡಿಕೆ ಕೀಳುತ್ತಿದ್ದಾಗ ಆಕಸ್ಮಿಕವಾಗಿ ಕಾಲು ಜಾರಿ ಮರದಿಂದ ಬಿದ್ದು ಮೃತಪಟ್ಟ ಘಟನೆ ಪಾಣೆಮಂಗಳೂರಿನ ಬೋಳಂಗಡಿಯಲ್ಲಿ ನಡೆದಿದೆ.
ಮೃತಪಟ್ಟ ಕಾರ್ಮಿಕ ಬೋಳಂಗಡಿ ಮಜಲ್ ಮನೆ ನಿವಾಸಿ ಜೋನ್ ಲೋಬೊ(45) ಎನ್ನಲಾಗಿದೆ.
ಘಟನೆಯ ವಿವರ: ನ. 13 ಬುಧವಾರದಂದುಜೋನ್ ಲೋಬೊ ಅವರು ಬೋಳಂಗಡಿ ಪದ್ಮನಾಭ ಪ್ರಭು ಎಂಬವರ ತೋಟದಲ್ಲಿ ಅಡಿಕೆ ಕೀಳುತ್ತಿದ್ದರು. ಈ ಸಂದರ್ಭದಲ್ಲಿ ಆಕಸ್ಮಿಕವಾಗಿ ಅಡಿಕೆ ಮರದಿಂದ ಬಿದ್ದಿದ್ದು, ತಕ್ಷಣವೇ ಅವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ಸಾಗಿಸಲಾಯಿತು. ಆದರೆ ಚಿಕಿತ್ಸೆ ನೀಡುತ್ತಿರುವ ಸಂದರ್ಭದಲ್ಲಿ ಪರೀಕ್ಷಿಸಿದ ವೈದ್ಯರು ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ.
ಈ ಕುರಿತಂತೆ ಪತ್ನಿ ಸ್ವಪ್ನ ವಿ.ಎಂ. ಅವರು ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ.
- Advertisement -


