Monday, June 15, 2026
Homeಅಪರಾಧಪ್ರೀತಿ ವಿಷಯ ತಿಳಿದು ಮಗಳನ್ನು ವಿದೇಶಕ್ಕೆ ಕಳುಹಿಸಿದ ತಂದೆ; ಪ್ರಿಯಕರನಿಂದ ತಂದೆಗೆ ಗುಂಡಿನ ದಾಳಿ

ಪ್ರೀತಿ ವಿಷಯ ತಿಳಿದು ಮಗಳನ್ನು ವಿದೇಶಕ್ಕೆ ಕಳುಹಿಸಿದ ತಂದೆ; ಪ್ರಿಯಕರನಿಂದ ತಂದೆಗೆ ಗುಂಡಿನ ದಾಳಿ

- Advertisement -
- Advertisement -

ಹೈದರಾಬಾದ್:‌ ಪ್ರಿಯಕರನೊಬ್ಬ ತನ್ನ ಪ್ರಿಯತಮೆಯನ್ನು ಆಕೆಯ ತಂದೆ ವಿದೇಶಕ್ಕೆ ಕಳುಹಿಸಿದ್ದಕ್ಕೆ ಅತನ ಮೇಲೆ ಗುಂಡು ಹಾರಿಸಿ ಹಲ್ಲೆ ಮಾಡಿರುವ ಘಟನೆ ನಡೆದಿದೆ.  

ಏರ್‌ಗನ್‌ ಹಿಡಿದುಕೊಂಡು ಅಪಾರ್ಟ್ಮೆಂಟ್ ಗೆ ನುಗ್ಗಿ ಗುಂಡು ಹಾರಿಸಿ ಹಲ್ಲೆ ಮಾಡಲು ಯತ್ನಿಸಿದ ಯುವಕ ಬಲ್ವಿಂದರ್ ಸಿಂಗ್(25). ಈತನನ್ನು ಹೈದರಾಬಾದ್ ಪೊಲೀಸರು ಬಂಧಿಸಿದ್ದಾರೆ.

ವಿದೇಶಕ್ಕೆ ಕಳುಹಿಸಲು ಮುಖ್ಯ ಉದ್ದೇಶ ಮಗಳ ಪ್ರೀತಿಯ ವಿಚಾರವಾಗಿದ್ದು, ತನ್ನ ಮಗಳಿಗೆ ಪ್ರೀತಿಯ ಹೆಸರಿನಲ್ಲಿ ಬಲ್ವಿಂದರ್ ಕಿರುಕುಳ ನೀಡುತ್ತಿದ್ದು, ಇದೇ ವಿಚಾರಕ್ಕಾಗಿ ಇತ್ತೀಚೆಗೆ ತನ್ನೊಂದಿಗೆ ಜಗಳವಾಡಿದ್ದಾನೆ. ಈ ಕಾರಣದಿಂದಲೇ ತಾನು ಮಗಳನ್ನು ಯುಎಸ್ ಗೆ ಕಳುಹಿಸಲು ಮುಂದಾಗಿದ್ದು ಎಂದು ಹುಡುಗಿತ ತಂದೆ ದೂರಿನಲ್ಲಿ ತಿಳಿಸಿದ್ದರೆ. 

ಪ್ರೀತಿಸಿದ ಹುಡುಗಿಯನ್ನು ವಿದೇಶಕ್ಕೆ ಕಳುಹಿಸಿದ್ದಕ್ಕೆ ಬಲ್ವಿಂದರ್‌ ಸಿಟ್ಟಿನಿಂದ ಯುವತಿಯ ತಂದೆಯ ಮೇಲೆ ಗುಂಡು ಹಾರಿಸಿ ಪರಾರಿ ಆಗಿದ್ದಾನೆ. ಇದರ ಪರಿಣಾಮವಾಗಿ ವ್ಯಕ್ತಿಯ ಬಲ ಕಣ್ಣಿಗೆ ಗಾಯವಾಗಿದೆ. ಸದ್ಯಕ್ಕೆ ವ್ಯಕ್ತಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಆರೋಪಿ ಬಲ್ವಿಂದರ್‌ ವಿರುದ್ಧ ಸರೂರ್ನಗರ ಪೊಲೀಸ್ ಠಾಣೆಯಲ್ಲಿ ಸೆಕ್ಷನ್ 109 ಅಡಿಯಲ್ಲಿ ದೂರು ದಾಖಲಿಸಿ ಬಂಧಿಸಲಾಗಿದೆ ಎನ್ನಲಾಗಿದೆ.

- Advertisement -

Latest News

error: Content is protected !!