Wednesday, June 3, 2026
Homeಕರಾವಳಿಮಂಗಳೂರುಮಂಗಳೂರಿನಲ್ಲಿ ಮಾದಕವಸ್ತು ಮಾರಾಟ ಯತ್ನ; ನೈಜೀರಿಯಾ ಪ್ರಜೆ ಸೇರಿ ಆರು ಜನರು ಅರೆಸ್ಟ್

ಮಂಗಳೂರಿನಲ್ಲಿ ಮಾದಕವಸ್ತು ಮಾರಾಟ ಯತ್ನ; ನೈಜೀರಿಯಾ ಪ್ರಜೆ ಸೇರಿ ಆರು ಜನರು ಅರೆಸ್ಟ್

- Advertisement -
- Advertisement -

ಮಂಗಳೂರು: ಮಾದಕ ವಸ್ತು ಸಾಗಾಟ ಮತ್ತು ಮಾರಾಟ ಮಾಡುತ್ತಿದ್ದ ಆರೋಪದಡಿ ಓರ್ವ ವಿದೇಶಿ ಪ್ರಜೆ ಸೇರಿ ಒಟ್ಟು ಆರು ಜನರನ್ನು ಮಂಗಳೂರಿನಲ್ಲಿ ಬಂಧನ ಮಾಡಲಾಗಿದೆ.

ನೈಜೀರಿಯಾ ದೇಶದ ಪ್ರಜೆ ಮೈಕಲ್ ಬಾಲಾಜಿ ಸೇರಿದಂತೆ
ಚಂದನ್, ಶರತ್, ಮಧುಸೂಧನ್, ಧನುಷ್ ಮತ್ತು ಮುಖೇಶ್ ಬಂಧಿತ ಆರೋಪಿಗಳಾಗಿದ್ದು, ಪಣಂಬೂರಿನ ಬೀಚ್ ರೋಡ್ ಬಳಿ ಕಾರ್ಯಾಚರಣೆ ನಡೆಸಿ ಪೊಲೀಸರು ಬಂಧಿಸಿದ್ದಾರೆ.

ಬೀಚ್ ರೋಡ್ ನಲ್ಲಿ ಸ್ಕೂಟರ್ ನಿಲ್ಲಿಸಿಕೊಂಡು ಮಾದಕ ವಸ್ತು ಮಾರಾಟಕ್ಕೆ ಯತ್ನಿಸುತ್ತಿದ್ದ ವೇಳೆ ಪೊಲೀಸರು ಬಂಧಿಸಿದ್ದು, ಬಂಧಿತರಿಂದ 11 ಗ್ರಾಂ ಕೋಕೇನ್, 30 ಗ್ರಾಂ ಎಂಡಿಎಂಎ ಸಹಿತ ಒಟ್ಟು 91 ಸಾವಿರ ರೂಪಾಯಿ ಮೌಲ್ಯದ ಮಾದಕವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.

ಅಲ್ಲದೇ ಆರೋಪಿಗಳಿಗೆ ಸೇರಿದ ಒಂಬತ್ತು ಮೊಬೈಲ್ ಫೋನ್ ಗಳು ಮತ್ತು ಸ್ಕೂಟರ್ ಅನ್ನು ಕೂಡಾ ಪೊಲೀಸರು ವಶಕ್ಕೆ ಪಡೆದಿದ್ದಾರೆ.

- Advertisement -

Latest News

error: Content is protected !!