Monday, June 8, 2026
Homeಕರಾವಳಿಉಡುಪಿಉಡುಪಿ: ತಮ್ಮ ಬರ್ತಡೇ ದಿನವೇ ಸಾವನ್ನಪ್ಪಿದ ಗ್ರಾಮ ಪಂಚಾಯತ್  ಮಾಜಿ ಅಧ್ಯಕ್ಷೆ

ಉಡುಪಿ: ತಮ್ಮ ಬರ್ತಡೇ ದಿನವೇ ಸಾವನ್ನಪ್ಪಿದ ಗ್ರಾಮ ಪಂಚಾಯತ್  ಮಾಜಿ ಅಧ್ಯಕ್ಷೆ

- Advertisement -
- Advertisement -

ಉಡುಪಿ: ಪಂಚಾಯತ್  ಮಾಜಿ ಅಧ್ಯಕ್ಷೆಯೊಬ್ಬರು ತಮ್ಮ ಬರ್ತಡೇ ದಿನವೇ ಸಾವನ್ನಪ್ಪಿದ ಘಟನೆ ಉದ್ಯಾವರದಲ್ಲಿ ನಡೆದಿದೆ. ಸರಳ ಕೋಟ್ಯಾನ್ (75) ಮೃತ ಮಹಿಳೆ.

ಸರಳ ಕೋಟ್ಯಾನ್ ಉದ್ಯಾವರ ಗ್ರಾಮ ಪಂಚಾಯತ್ ಅಧ್ಯಕ್ಷೆಯಾಗಿ ಸೇವೆ ಸಲ್ಲಿಸಿದ್ದರು. ಅವರು ಅಲ್ಪ ಕಾಲದ ಅಸೌಖ್ಯದಿಂದ ಇಂದು ಸಾವನ್ನಪ್ಪಿದ್ದಾರೆ.

 40ಕ್ಕೂ ಅಧಿಕ ವರ್ಷ ಗ್ರಾಮೀಣ ಕಾಂಗ್ರೆಸ್ ಪದಾಧಿಕಾರಿಯಾಗಿ ಕಾರ್ಯಕರ್ತೆಯಾಗಿ ಸೇವೆ ಸಲ್ಲಿಸಿದ್ದ ಇವರು, ಎರಡು ಬಾರಿ ಪಂಚಾಯತ್ ಸದಸ್ಯರಾಗಿ ಸೇವೆ ಸಲ್ಲಿಸಿದ್ದರು. ಒಂದು ಅವಧಿಗೆ ಕೆಎಫ್’ಡಿಸಿ ಸದಸ್ಯರಾಗಿಯೂ, 1995 -98 ಅವರಿಗೆ ಉದ್ಯಾವರ ಗ್ರಾಮ ಪಂಚಾಯತ್ ಅಧ್ಯಕ್ಷೆಯಾಗಿಯೂಸೇವೆ ಸಲ್ಲಿಸಿದ್ದರು.

ಅತ್ಯಂತ ಸರಳ ಸ್ವಭಾವದ ಇವರು ಉದ್ಯಾವರದಲ್ಲಿ ಸರಳಕ್ಕ ಎಂದೇ ಪ್ರಸಿದ್ಧರಾಗಿದ್ದರು. ವಿಪರ್ಯಾಸ ಎಂದರೆ ಇಂದು ಅವರ 75ನೇ ವರ್ಷದ ಹುಟ್ಟಿದ ದಿನ. ಅಮೃತೋತ್ಸವದ ಜನ್ಮದಿನದಂದೆ ನಿಧನರಾದ ಸರಳಾ ಕೋಟ್ಯಾನ್ ಇಬ್ಬರು ಪುತ್ರರು, ಮೊಮ್ಮಕ್ಕಳು, ಸಹೋದರರು – ಸಹೋದರಿ, ಕುಟುಂಬಸ್ಥರು ಮತ್ತು ಅಪಾರ ಬಂಧು ಬಳಗದವರನ್ನು ಅಗಲಿದ್ದಾರೆ.

- Advertisement -

Latest News

error: Content is protected !!