Friday, August 28, 2026
Homeತಾಜಾ ಸುದ್ದಿಬಿಷ್ಣೋಯಿನ ಕೊಲ್ಲಲು ಬಂಪರ್ ಬಹುಮಾನ ಘೋಷಣೆ; ಹತ್ಯೆಗೈಯುವ ಪೊಲೀಸ್‌ ಅಧಿಕಾರಿಗೆ 1.11 ಕೋಟಿ ರೂ. ಬಹುಮಾನ!;...

ಬಿಷ್ಣೋಯಿನ ಕೊಲ್ಲಲು ಬಂಪರ್ ಬಹುಮಾನ ಘೋಷಣೆ; ಹತ್ಯೆಗೈಯುವ ಪೊಲೀಸ್‌ ಅಧಿಕಾರಿಗೆ 1.11 ಕೋಟಿ ರೂ. ಬಹುಮಾನ!; ಕರ್ಣಿ ಸೇನಾ

- Advertisement -
- Advertisement -

ನವದೆಹಲಿ: ಕುಖ್ಯಾತ ಗ್ಯಾಂಗ್‌ ಸ್ಟರ್‌ ಲಾರೆನ್ಸ್‌ ಬಿಷ್ಣೋಯಿ ಗುಜರಾತ್‌ ಜೈಲಿನಲ್ಲಿದ್ದು, ಈತನನ್ನು ಯಾವ ಪೊಲೀಸ್‌ ಅಧಿಕಾರಿಯಾದರು ಹತ್ಯೆಗೈದರೆ ಅವರಿಗೆ 1,11,11,111 ರೂಪಾಯಿ ಬಹುಮಾನ ನೀಡುವುದಾಗಿ ಕ್ಷತ್ರೀಯ ಕರ್ಣಿ ಸೇನಾ ಘೋಷಿಸಿದೆ.

ಸಾರ್ವಜನಿಕವಾಗಿ ಕರ್ಣಿ ಸೇನಾ ರಾಷ್ಟ್ರೀಯ ಅಧ್ಯಕ್ಷ ರಾಜ್‌ ಶೇಖಾವತ್‌, ಬಿಷ್ಣೋಯಿಯನ್ನು ಹತ್ಯೆಗೈಯುವ ಯಾವುದೇ ಪೊಲೀಸ್‌ ಅಧಿಕಾರಿಯಾಗಿರಲಿ ಅವರಿಗೆ 1,11,11,111 ರೂಪಾಯಿ ಬಹುಮಾನ ನೀಡುವುದಾಗಿ ಸಾರ್ವಜನಿಕವಾಗಿ ಘೋಷಿಸಿದ್ದಾರೆ.

ಸಾಬರಮತಿ ಜೈಲಿನಲ್ಲಿ ಬಂಧಿಯಾಗಿರುವ ಬಿಷ್ಣೋಯಿ ಪಾತಕ ಕೃತ್ಯ ಎಸಗುತ್ತಿದ್ದರೂ ಕೂಡಾ ಕೇಂದ್ರ ಸರ್ಕಾರ ಮತ್ತು ಗುಜರಾತ್‌ ಸರ್ಕಾರ ಕಣ್ಮುಚ್ಚಿ ಕುಳಿತಿರುವುದಾಗಿ ಶೇಖಾವತ್‌ ಆರೋಪಿಸಿದ್ದಾರೆ.

ಏಪ್ರಿಲ್‌ ತಿಂಗಳಿನಲ್ಲಿ ಬಾಲಿವುಡ್‌ ನಟ ಸಲ್ಮಾನ್‌ ಖಾನ್‌ ನಿವಾಸದ ಮೇಲೂ ಗುಂಡಿನ ದಾಳಿ ನಡೆಸಲಾಗಿತ್ತು. ಆದರೆ ಲಾರೆನ್ಸ್‌ ಬಿಷ್ಣೋಯಿಯನ್ನು ತಮ್ಮ ವಶಕ್ಕೆ ಪಡೆಯುವಲ್ಲಿ ಮುಂಬೈ ಪೊಲೀಸರು ವಿಫಲರಾಗಿದ್ದರು ಎಂದು ತಿಳಿಸಿದ್ದಾರೆ.

- Advertisement -

Latest News

error: Content is protected !!