Thursday, June 4, 2026
Homeತಾಜಾ ಸುದ್ದಿಬಸ್ ನಿಲ್ದಾಣದಲ್ಲಿದ್ದ ವಿದ್ಯಾರ್ಥಿಯ ಮೇಲೆ ಹರಿದ ಪ್ರವಾಸಿ ಬಸ್;‌ ವಿದ್ಯಾರ್ಥಿ ಸಾವು

ಬಸ್ ನಿಲ್ದಾಣದಲ್ಲಿದ್ದ ವಿದ್ಯಾರ್ಥಿಯ ಮೇಲೆ ಹರಿದ ಪ್ರವಾಸಿ ಬಸ್;‌ ವಿದ್ಯಾರ್ಥಿ ಸಾವು

- Advertisement -
- Advertisement -

ಶಿವಮೊಗ್ಗ: ವಿದ್ಯಾರ್ಥಿಯೋರ್ವ ತಾಲ್ಲೂಕಿನ ಬೆಜ್ಜವಳ್ಳಿ ಬಸ್ ನಿಲ್ದಾಣದಲ್ಲಿ ಅ.18 ಶುಕ್ರವಾರದಂದು ಕಾಲೇಜಿಗೆ ಹೋಗಲು ಬಸ್ ಗಾಗಿ ಕಾಯುತ್ತಿದ್ದ ವೇಳೆಯಲ್ಲಿ ಪ್ರವಾಸಿ ಬಸ್ಸೊಂದು ಈತನ ಮೇಲೆ ಹರಿದಿದ್ದು, ಘಟನೆಯಲ್ಲಿ ವಿದ್ಯಾರ್ಥಿ ಸಾವನ್ನಪ್ಪಿದ್ದಾನೆ.

ಸಾವನ್ನಪ್ಪಿದ ವಿದ್ಯಾರ್ಥಿ ಪ್ರಥಮ್ ಎಂದು ತಿಳಿದು ಬಂದಿದೆ. 

ಪ್ರಥಮ್ ನನ್ನು ಆಸ್ಪತ್ರೆ ದಾಖಲಿಸುವ ವೇಳೆ ಮಾರ್ಗ ಮಧ್ಯದಲ್ಲಿ ಕೊನೆಯುಸಿರೆಳೆದಿದ್ದಾನೆ ಎನ್ನಲಾಗಿದೆ. 

ಘಟನೆಯ ವಿವರ: ಪ್ರವಾಸಿಗರ ತಂಡವೊಂದು ಗೋವಾ- ಮಂಗಳೂರು ಪ್ರವಾಸ ಮುಗಿಸಿಕೊಂಡು ಸಕ್ರೆಬೈಲಿಗೆ ಬರುತ್ತಿದ್ದು, ಈ ಸಂದರ್ಭದಲ್ಲಿ ಬಸ್ ಚಾಲಕ ಓವರ್ ಟೇಕ್ ಮಾಡುವಾಗ ಬಸ್ ಸ್ಟ್ಯಾಂಡ್ ನಲ್ಲಿಯೇ ನಿಂತಿದ್ದ ವಿದ್ಯಾರ್ಥಿ ಪ್ರಥಮ್ ಮೇಲೆ ಹರಿದಿದೆ. ತನಿಕಲ್ ಗ್ರಾಮದ ಪಾಂಡ್ಯ ಗ್ರಾಮದ ವಿದ್ಯಾರ್ಥಿ ಪ್ರಥಮ್‌ ತೀರ್ಥಹಳ್ಳಿಯಲ್ಲಿ ಪ್ರಥಮ ವರ್ಷ ಡಿಪ್ಲೊಮಾ ಓದುತ್ತಿದ್ದ. ಮಾಳೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

Latest News

error: Content is protected !!