Thursday, June 4, 2026
Homeತಾಜಾ ಸುದ್ದಿಕುಸ್ತಿಪಟು ವಿನೇಶ್ ಫೋಗಾಟ್ ಗೆಲುವಿನ ಬಗ್ಗೆ ಪ್ರತಿಕ್ರಿಯಿಸಿದ ಬ್ರಿಜ್ ಭೂಷಣ್!

ಕುಸ್ತಿಪಟು ವಿನೇಶ್ ಫೋಗಾಟ್ ಗೆಲುವಿನ ಬಗ್ಗೆ ಪ್ರತಿಕ್ರಿಯಿಸಿದ ಬ್ರಿಜ್ ಭೂಷಣ್!

- Advertisement -
- Advertisement -

ಕುಸ್ತಿಪಟು ವಿನೇಶ್ ಫೋಗಾಟ್ ಹರಿಯಾಣ ವಿಧಾನಸಭೆ ಚುನಾವಣೆಯಲ್ಲಿ ಜುಲಾನಾ ವಿಧಾನಸಭಾ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿ ಗೆದ್ದ ಕೆಲವೇ ಗಂಟೆಗಳ ನಂತರ, ಬಿಜೆಪಿಯ ಮಾಜಿ ಸಂಸದ ಬ್ರಿಜ್ ಭೂಷಣ್ ಶರಣ್ ಸಿಂಗ್ ‘ಆಕೆ ಗೆಲುವು ಸಾಧಿಸಲು ನನ್ನ ಹೆಸರಿನ ಶಕ್ತಿ ಸಹಾಯ ಮಾಡಿದೆ’ ಎಂದು ಅವರು ಪ್ರತಿಕ್ರಿಯೆ ನೀಡಿದ್ದಾರೆ.

ವಿನೇಶ್ ಫೋಗಾಟ್ ಕಳೆದ ತಿಂಗಳು ಕಾಂಗ್ರೆಸ್‌ಗೆ ಸೇರ್ಪಡೆಗೊಂಡಿದ್ದು, 65,080 ಮತಗಳನ್ನು ಗಳಿಸಿ 6,105 ಮತಗಳಿಂದ ತಮ್ಮ ಪ್ರತಿಸ್ಪರ್ಧಿ ಬಿಜೆಪಿಯ ಯೋಗೇಶ್ ಕುಮಾರ್ ಅವರನ್ನು ಸೋಲಿಸುವ ಮೂಲಕ ಜುಲಾನಾ ವಿಧಾನಸಭೆ ಕ್ಷೇತ್ರದಲ್ಲಿ ಜಯ ಸಾಧಿಸಿ ವಿಧಾನ ಸಭೆ ಪ್ರವೇಶಿಸಿದ್ದಾರೆ. ಇನ್ನು ಈ ಕುರಿತಂತೆ ಸುದ್ದಿ ಸಂಸ್ಥೆಯಾದ ಪಿಟಿಐ, “ವಿನೇಶ್ ಫೋಗಾಟ್ ನನ್ನ ಹೆಸರನ್ನು ಬಳಸಿಕೊಂಡು ಗೆದ್ದರೆ, ಅದರರ್ಥ ನಾನೊಬ್ಬ ಮಹಾನ್ ವ್ಯಕ್ತಿಯೆಂದು. ಕನಿಷ್ಠ ನನ್ನ ಹೆಸರಿಗಾದರೂ ಆಕೆಯ ರಾಜಕೀಯ ಯಾನಕ್ಕೆ ಸಹಾಯ ಮಾಡುವಷ್ಟು ಶಕ್ತಿ ಇದೆಯಲ್ಲ” ಎಂದು ಕಾರ್ಯಕ್ರಮವೊಂದರಲ್ಲಿ ಸಿಂಗ್ ಹೇಳಿಕೆ ನೀಡಿರುವುದಾಗಿ ವರದಿ ಮಾಡಿದೆ.

“ವಿನಾಶವು ವಿನೇಶ್ ಫೋಗಾಟ್ ನನ್ನು ಎಲ್ಲಿಗೆ ಹೋದರೂ ಹಿಂಬಾಲಿಸುತ್ತದೆ, ಮತ್ತು ಭವಿಷ್ಯದಲ್ಲಿ ಅದು ಸಂಭವಿಸುತ್ತದೆ ಕೂಡ. ಅವಳು ಸ್ವತಃ ಚುನಾವಣೆಯಲ್ಲಿ ಗೆದ್ದಿರಬಹುದು ಆದರೆ ಕಾಂಗ್ರೆಸ್ ಸಂಪೂರ್ಣವಾಗಿ ಅವನತಿ ಹೊಂದುತ್ತದೆ. ಈ ರೀತಿಯ ಕುಸ್ತಿಪಟುಗಳು ಹೀರೋಗಳಲ್ಲ ಅವರು ಹರಿಯಾಣಕ್ಕೆ ಖಳನಾಯಕರು” ಎಂದು ಮಾಜಿ ಕುಸ್ತಿ ಫೆಡರೇಶನ್ ಆಫ್ ಇಂಡಿಯಾ ಮುಖ್ಯಸ್ಥ, ಮಾಜಿ ಬಿಜೆಪಿ ಸಂಸದ ಕಿಡಿ ಕಾರಿದ್ದಾರೆ.

ಬಿಜೆಪಿ ಪಕ್ಷವು ಹರಿಯಾಣದಲ್ಲಿ 48 ಸ್ಥಾನಗಳೊಂದಿಗೆ ಸ್ಪಷ್ಟ ಬಹುಮತವನ್ನು ಗಳಿಸಿದ್ದು, ಕಾಂಗ್ರೆಸ್ ಪಕ್ಷವು 37 ಸ್ಥಾನ ಗಳಿಸಿದೆ. ರಾಹುಲ್ ಗಾಂಧಿಯವರು ಹರಿಯಾಣದಲ್ಲಿ ನಡೆಸಿರುವ ಪ್ರಯತ್ನಗಳು ವಿಫಲವಾಗುತ್ತಿವೆ. ದೇಶದ ಜನರು ಕಾಂಗ್ರೆಸ್ ಅನ್ನು ತಿರಸ್ಕರಿಸಿದ್ದಾರೆ ಎಂಬುದನ್ನು ಅವರು ಒಪ್ಪಿಕೊಳ್ಳಬೇಕು” ಎಂದು ಬ್ರಿಜ್ ಭೂಷಣ್ ಸಿಂಗ್ ಹೇಳಿದ್ದಾರೆ.

- Advertisement -

Latest News

error: Content is protected !!