Wednesday, June 3, 2026
Homeಕರಾವಳಿಮಾಜಿ ಶಾಸಕ ಮೊಯ್ದಿನ್ ಬಾವ ತಮ್ಮ ಮುಂತಾಝ್ ನಿಗೂಢವಾಗಿ ನಾಪತ್ತೆ: ಅಪಘಾತ ಸ್ಥಿತಿಯಲ್ಲಿ ಸೇತುವೆ...

ಮಾಜಿ ಶಾಸಕ ಮೊಯ್ದಿನ್ ಬಾವ ತಮ್ಮ ಮುಂತಾಝ್ ನಿಗೂಢವಾಗಿ ನಾಪತ್ತೆ: ಅಪಘಾತ ಸ್ಥಿತಿಯಲ್ಲಿ ಸೇತುವೆ ಬಳಿ ಕಾರು ಪತ್ತೆ

- Advertisement -
- Advertisement -

ಕುಳೂರು: ಮಂಗಳೂರು ಮಾಜಿ ಶಾಸಕ ಮೊಯ್ದಿನ್ ಬಾವರವರ ತಮ್ಮ ಮುಂತಾಝ್ ಅಲಿರವರ ಕಾರು ಮಂಗಳೂರಿನ ಕೂಳೂರು ಸೇತುವೆಯಲ್ಲಿ ಅಪಘಾತ ಆದ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಮುಂತಾಝ್ ಅವರು ಇಂದು ಬೆಳಗ್ಗಿನ ಜಾವ ನಿಗೂಢವಾಗಿ ನಾಪತ್ತೆಯಾಗಿದ್ದಾರೆ.

ಮುಂತಾಜ್ ಅವರು ನಸುಕಿನ ಜಾವದಲ್ಲಿ ಮನೆಯವರಿಗೆ ತಿಳಿಸದೆ ತೆರಳಿದ್ದು, ಬಳಿಕ ಮನೆಯವರ ಸಂಪರ್ಕಕ್ಕೂ ಸಿಗದೇ ಕಣ್ಮರೆಯಾಗಿದ್ದಾರೆ ಎನ್ನಲಾಗಿದೆ.

ಇನ್ನು ಅವರ ಕಾರು ಮಂಗಳೂರಿನ ಕುಳೂರು ಸೇತುವೆ ಬಳಿಯಲ್ಲಿ ಬೆಳಗ್ಗೆ 5 ಗಂಟ್ಟೆ ಸುಮಾರಿಗೆ ಪತ್ತೆಯಾಗಿದ್ದು, ಮುಂತಾಜ್ ಅವರು ನೀರಿಗೆ ಹಾರಿರಬಹುದಾ ಅಥವಾ ಯಾರಾದರೂ ಅವರನ್ನು ನೀರಿಗೆ ಎಸೆದಿರಬವುದ ಎನ್ನುವ ಸಂಶಯ ವ್ಯಕ್ತವಾಗುತ್ತಿದೆ. ಈ ನಿಟ್ಟಿನಲ್ಲಿ ನದಿಯಲ್ಲಿ ಡಿ ಆರ್ ಎಫ್ ಮತ್ತು ಅಗ್ನಿ ಶಾಮಕ ದಳದವರು ಕಾರ್ಯಾಚರಣೆ ನಡೆಸುತ್ತಿದ್ದಾರೆ.

ಈಗಾಗಲೇ ಕಾರು ಪತ್ತೆಯಾದ ಸ್ಥಳಕ್ಕೆ ಮಾಜಿ ಶಾಸಕ ಮೊಯ್ದಿನ್ ಬಾವರವರವರು ಕುಟುಂಬ ಸಮೇತರಾಗಿ ಭೇಟಿ ನೀಡಿದ್ದಾರೆ.

ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿರುವ ಮಂಗಳೂರು ನಗರ ಕಮೀಷನರು ಅನುಪಮ್ ಅಗರ್ವಾಲ್ ಮಾಧ್ಯಮಗಳಿಗೆ, ‘ಬೆಳಗ್ಗೆ 3 ಗಂಟ್ಟೆಗೆ ಮುಂತಾಜ್ ಅವರು ತಮ್ಮ ಮನೆಯಿಂದ BMW ಕಾರನ್ನು ಚಲಾಯಿಸಿಕೊಂಡು ಬಂದಿದ್ದಾರೆ. ಕಾರು ಅಪಘಾತವಾಗಿ ಕುಳೂರು ಸೇತುವೆಯ ಬಳಿ ಕಾಣೆಯಾಗಿದ್ದಾರೆ. ಅವರು ನದಿಗೆ ಹಾರಿರುವ ಶಂಕೆ ಇದ್ದು, ಈಗಾಗಲೇ ವಿವಿಧ ತಂಡಗಳು ಕಾರ್ಯಾಚರಣೆ ನಡೆಸುತ್ತಿದೆ,’ ಎಂದು ಮಾಹಿತಿ ನೀಡಿದರು.

- Advertisement -

Latest News

error: Content is protected !!