Saturday, October 17, 2026
Homeತಾಜಾ ಸುದ್ದಿಅತ್ಯಾಚಾರ ಪ್ರಕರಣದಲ್ಲಿ ಅರೆಸ್ಟ್ ಆಗಿರುವ ಶಾಸಕ ಮುನಿರತ್ನ ಮನೆ, ಕಚೇರಿ ಮೇಲೆ ಎಸ್ ಐಟಿ ದಾಳಿ

ಅತ್ಯಾಚಾರ ಪ್ರಕರಣದಲ್ಲಿ ಅರೆಸ್ಟ್ ಆಗಿರುವ ಶಾಸಕ ಮುನಿರತ್ನ ಮನೆ, ಕಚೇರಿ ಮೇಲೆ ಎಸ್ ಐಟಿ ದಾಳಿ

- Advertisement -
- Advertisement -

ಬೆಂಗಳೂರು: ಜೀವ ಬೆದರಿಕೆ ಹಾಗೂ ಜಾತಿ ನಿಂದನೆ  ಪ್ರಕರಣದಲ್ಲಿ ಅರೆಸ್ಟ್ ಆಗಿ  ಬಳಿಕ ಜಾಮೀನಿನ ಮೇಲೆ ರಿಲೀಸ್ ಆಗಿ ಅತ್ಯಾಚಾರ ಪ್ರಕರಣದಲ್ಲಿ ಮತ್ತೆ ಜೈಲು ಸೇರಿರುವ ಬೆಂಗಳೂರಿನ ಆರ್ ಆರ್ ನಗರದ ಶಾಸಕ ಮುನಿರತ್ನ ಮನೆ, ಕಚೇರಿ ಮೇಲೆ ಇದೀಗ ಎಸ್ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ.

ಹೌದು.. ಬಿಜೆಪಿ ಶಾಸಕ ಮುನಿರತ್ನರವರ ವೈಯಾಲಿಕಾವಲ್ ಮನೆ ಸೇರಿ ಹಲವು ಕಡೆ ವಿಶೇಷ ತನಿಖಾ ತಂಡದ ಅಧಿಕಾರಿಗಳು ಶನಿವಾರ ಬೆಳಗ್ಗೆ ದಾಳಿ ನಡೆಸಿದ್ದಾರೆ.ಮೂರು ತಂಡಗಳಲ್ಲಿ ಎಸ್ ಐಟಿ ತಂಡ ಮುನಿರತ್ನ ಮನೆ ಮೇಲೆ ದಾಳಿ ನಡೆಸಿದೆ.ಎಸ್​ಐಟಿ ಎಸಿಪಿ ಕವಿತಾ ನೇತೃತ್ವದಲ್ಲಿ ದಾಳಿ ನಡೆಸಿದ ಅಧಿಕಾರಿಗಳ ತಂಡ ದಾಖಲೆಗಳ ಪರಿಶೀಲನೆ ನಡೆಸಿದೆ.

- Advertisement -

Latest News

error: Content is protected !!