ಬೆಂಗಳೂರು; ಕನ್ನಡತಿ ಧಾರಾವಾಹಿ ಖ್ಯಾತಿಯ ನಟ ಕಿರಣ್ ರಾಜ್ ಕಾರು ಅಪಘಾತವಾಗಿದೆ. ಸದ್ಯರಾನಿ ಚಿತ್ರದ ನಾಯಕರಾಗಿರುವ ಕಿರಣ್ ರಾಜ್ ಪ್ರಯಾಣಿಸುತ್ತಿದ್ದ ಕಾರು ಅಪಘಾತವಾಗಿದೆ. ಅಪಘಾತದಲ್ಲಿ ಕಾರು ಫುಲ್ ಜಖಂ ಆಗಿದ್ದು, ಘಟನೆಯಲ್ಲಿ ನಟ ಕಿರಣ್ ರಾಜ್ ಗಂಭೀರವಾಗಿ ಗಾಯಗೊಂಡಿದ್ದಾರೆ ಎನ್ನಲಾಗಿದೆ.
ಕೆಂಗೇರಿ ಉಪನಗರದ ಶಿರ್ಸಿ ಸರ್ಕಲ್ ಬಳಿ ಅಪಘಾತ ಸಂಭವಿಸಿದ್ದು, ಘಟನೆ ವೇಳೆ ರಾನಿ ಸಿನಿಮಾದ ಎಕ್ಸಿಕ್ಯೂಟಿವ್ ಪ್ರೊಡ್ಯೂಸರ್ ಹಾಗೂ ನಟ ಕಿರಣ್ ರಾಜ್ ಕಾರಿನಲ್ಲಿದ್ದರಂತೆ. ಆಶ್ರಮವೊಂದಕ್ಕೆ ತೆರಳಿ ವಾಪಸ್ ಆಗುವ ವೇಳೆ ಕಾರು ಅಪಘಾತ ಸಂಭವಿಸಿದ್ದು, ನಿಯಂತ್ರಣ ತಪ್ಪಿ ಬೆಂಜ್ ಕಾರು ಮರಕ್ಕೆ ಡಿಕ್ಕಿ ಹೊಡೆದಿದೆ.

ಸದ್ಯ ಆಸ್ಪತ್ರೆಯಲ್ಲಿ ಪ್ರಜ್ಞಾಹೀನ ಸ್ಥಿತಿಯಲ್ಲಿರುವ ನಟ ಕಿರಣ್ ರಾಜ್ಗೆ ಚಿಕಿತ್ಸೆ ಮುಂದುವರೆದಿದ್ದು, ಕಿರಣ್ ಎದೆ ಭಾಗಕ್ಕೆ ಭಾರೀ ಪೆಟ್ಟಾಗಿದೆ ಎನ್ನಲಾಗಿದೆ. ಕೆಂಗೇರಿ ಹತ್ತಿರದ ಬೆಂಗಳೂರು ಹಾಸ್ಪಿಟಲ್ನಲ್ಲಿ ಕಿರಣ್ ರಾಜ್ ಗೆ ಚಿಕಿತ್ಸೆ ನೀಡಲಾಗುತ್ತಿದ್ದು, ನಟನ ಜೊತೆಯಲ್ಲಿದ್ದ ಎಕ್ಸಿಕ್ಯೂಟಿವ್ ಪ್ರೊಡ್ಯೂಸರ್ ಸೀಟ್ ಬೀಲ್ಟ್ ನಿಂದಾಗಿ ಸೇಫ್ ಆಗಿದ್ದಾರೆ ಎನ್ನಲಾಗಿದೆ. ಕಿರಣ್ ಅಭಿನಯದ ರಾನಿ ಸಿನಿಮಾ ಶುಕ್ರವಾರ ರಿಲೀಸ್ ಆಗಲಿದ್ದು ಅದಕ್ಕೆ ಒಂದು ದಿನದ ಮೊದಲು ಅಪಘಾತವಾಗಿರೋದು ಚಿತ್ರತಂಡವನ್ನು ಕಂಗೆಡಿಸಿದೆ.


