Wednesday, June 3, 2026
Homeಕರಾವಳಿಉಡುಪಿಕಾರ್ಕಳ: ಪ್ರಚೋದನಕಾರಿ ಫ್ಲೆಕ್ಸ್ ಅಳವಡಿಕೆ ಪ್ರಕರಣ; ಮಹಿಳೆ ಸಹಿತ ಇಬ್ಬರ ಬಂಧನ

ಕಾರ್ಕಳ: ಪ್ರಚೋದನಕಾರಿ ಫ್ಲೆಕ್ಸ್ ಅಳವಡಿಕೆ ಪ್ರಕರಣ; ಮಹಿಳೆ ಸಹಿತ ಇಬ್ಬರ ಬಂಧನ

- Advertisement -
- Advertisement -

ಕಾರ್ಕಳ: ಪ್ರಚೋದನಕಾರಿ ಫ್ಲೆಕ್ಸ್ ಅಳವಡಿಕೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಮಹಿಳೆ ಸಹಿತ ಇಬ್ಬರನ್ನು ಬಂಧಿಸಿರುವ ಘಟನೆ ಕಾರ್ಕಳದ ಸಾಣೂರಿನಲ್ಲಿ ನಡೆದಿದೆ.ಸಾಣೂರಿನ ಮುರತ್ತಂಗಡಿಯ ಕ್ಯಾಶ್ಯೂ ಫ್ಯಾಕ್ಟರಿ ಬಳಿ ಪ್ರಚೋದನಕಾರಿ ಫ್ಲೆಕ್ಸ್‌ ಅಳವಡಿಸಲಾಗಿತ್ತು. ಈ ಬಗ್ಗೆ ಸಾಣೂರು ಗ್ರಾ.ಪಂ. ಪಿಡಿಒ ಮಧು ಎಂ.ಸಿ. ನೀಡಿದ ದೂರಿನಂತೆ ಕಾರ್ಕಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಈ ಬಗ್ಗೆ ತನಿಖೆ ನಡೆಸಿದ ಪೊಲೀಸರು ಆರೋಪಿ ಸತೀಶ್‌ ದೇವಾಡಿಗ ಹಾಗೂ ಫ್ಲೆಕ್ಸ್‌ ಮಾಡಿಕೊಟ್ಟಿದ್ದ ಕಾರ್ಕಳ ಮಾರ್ಕೆಟ್‌ ರಸ್ತೆಯಲ್ಲಿರುವ ಗ್ರಾಫಿಕ್ಸ್ ಮಾಲಕಿ ಪುಷ್ಪಲತಾ ಅವರನ್ನು ಕಾರ್ಕಳ ನಗರ ಪೊಲೀಸರು ಬಂಧಿಸಿ ಕಾರ್ಕಳ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ಆರೋಪಿ ಸತೀಶ್‌ ದೇವಾಡಿಗನಿಗೆ ನ್ಯಾಯಾಲಯವು ನ್ಯಾಯಾಂಗ ಬಂಧನ ವಿಧಿಸಿದ್ದು, ಮಹಿಳಾ ಆರೋಪಿ ಪುಷ್ಪಲತಾಗೆ ಷರತ್ತು ಬದ್ಧ ಜಾಮೀನು ನೀಡಿದೆ.

- Advertisement -

Latest News

error: Content is protected !!