ಉಡುಪಿ: ಬಿಕಿನಿ ಧರಿಸಿ ಬೀಚ್ ನಲ್ಲಿ ಫೋಟೋ ಶೂಟ್ ನಡೆಸುವುದಕ್ಕೆ ಪೊಲೀಸರು ಅಡ್ಡಿಯುಂಟು ಮಾಡಿದ್ದಾರೆ ಎಂದು ದೆಹಲಿ ಮೂಲದ ಯೂಟ್ಯೂಬರ್ ಯುವತಿಯೊಬ್ಬರು ಸಾಮಾಜಿಕ ಜಾಲತಾಣ ಇನ್ ಸ್ಟಾಗ್ರಾಂ ನಲ್ಲಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಮಲ್ಪೆ ಸಮೀಪದ ಪಡುಕರೆ ಬೀಚ್ ನಲ್ಲಿ ಯೂಟ್ಯೂಬರ್ ಖ್ಯಾತಿಶ್ರೀ ಎಂಬವರು ಬಿಕಿನಿಯಲ್ಲಿ ಫೋಟೋ ಶೂಟ್ ಮಾಡುತ್ತಿದ್ದಾಗ ಸ್ಥಳೀಯ ಪೊಲೀಸರು ಬಂದು ಅಡ್ಡಿಪಡಿಸಿದ್ದಾರೆ ಎಂದು ಇನ್ ಸ್ಟಾಗ್ರಾಂನಲ್ಲಿ ಆರೋಪಿಸಿದ್ದಾರೆ.
ಬಿಕಿನಿ ಬದಲು ಬೇರೆ ಬಟ್ಟೆ ಧರಿಸಿಕೊಳ್ಳುವಂತೆ ಪೊಲೀಸರು ಬಂದು ಸೂಚಿಸಿದ್ದು, ಇಲ್ಲದಿದ್ದರೆ ಸ್ಥಳೀಯರು ಬಂದು ಹಲ್ಲೆ ನಡೆಸುತ್ತಾರೆ ಎಂದು ಎಚ್ಚರಿಕೆ ನೀಡಿದರು, ನನ್ನ ಪತಿ ಫೋಟೋ ತೆಗೆಯುತ್ತಿದ್ದು, ಕೊನೆಗೆ ಭಯಪಟ್ಟು ನಾವು ಸ್ಥಳದಿಂದ ಹೊರಟೆವು ಎಂದು ಪೊಲೀಸರ ವಿರುದ್ಧ ಖ್ಯಾತಿಶ್ರೀ ಅಸಮಾಧಾನ ಹೊರ ಹಾಕಿದ್ದಾರೆ.
ಪಡುಕರೆ ಬೀಚ್ ನಲ್ಲಿ ಬಿಕಿನಿಯಲ್ಲಿ ಶೂಟ್ ಮಾಡಿದ ಫೋಟೋ ಗಳನ್ನು ತನ್ನ ಇನ್ ಸ್ಟಾಗ್ರಾಂ ಖಾತೆಯಲ್ಲಿ ಅಪ್ ಲೋಡ್ ಮಾಡಿರುವ ಖ್ಯಾತಿಶ್ರೀ, ಬೀಚ್ ಸಾರ್ವಜನಿಕ ಪ್ರದೇಶವಾಗಿದ್ದು, ಬಿಕಿನಿಯಲ್ಲಿ ಫೋಟೋ ಶೂಟ್ ಮಾಡಿಸಿಕೊಂಡರೆ ತಪ್ಪೇನು ಎಂದು ಪ್ರಶ್ನಿಸಿದ್ದಾರೆ.


