Saturday, June 13, 2026
Homeತಾಜಾ ಸುದ್ದಿಮಹಿಳೆಯರಿಗೆ ತಿಂಗಳಿಗೆ ಒಂದು ದಿನ ಮುಟ್ಟಿನ ರಜೆ: ಕೇರಳ, ಬಿಹಾರದ ಬಳಿಕ ಒಡಿಶಾ ಸರ್ಕಾರದಿಂದ ಘೋಷಣೆ

ಮಹಿಳೆಯರಿಗೆ ತಿಂಗಳಿಗೆ ಒಂದು ದಿನ ಮುಟ್ಟಿನ ರಜೆ: ಕೇರಳ, ಬಿಹಾರದ ಬಳಿಕ ಒಡಿಶಾ ಸರ್ಕಾರದಿಂದ ಘೋಷಣೆ

- Advertisement -
- Advertisement -

ಒಡಿಶಾ ಸರ್ಕಾರವು ಖಾಸಗಿ ಮತ್ತು ಸಾರ್ವಜನಿಕ ವಲಯಗಳಲ್ಲಿ ಕೆಲಸ ಮಾಡುವ ಮಹಿಳಾ ಉದ್ಯೋಗಿಗಳಿಗೆ ಒಂದು ದಿನದ ಮುಟ್ಟಿನ ರಜೆಯನ್ನು ಘೋಷಿಸಿದೆ.

ಎಲ್ಲ ವೃತ್ತಿಗಳಲ್ಲಿ ಕೆಲಸ ಮಾಡುವ ಮಹಿಳೆಯರಿಗೆ ಈ ರಜೆಯು ಅನ್ವಯವಾಗುತ್ತದೆ. ಈ ಹಿಂದೆ, ಕೇರಳ ಮತ್ತು ಬಿಹಾರ ರಾಜ್ಯಗಳು ಮಹಿಳಾ ಉದ್ಯೋಗಿಗಳಿಗೆ ಮುಟ್ಟಿನ ರಜೆಯನ್ನು ಪರಿಚಯಿಸಿತ್ತು. ಇದೀಗ ಒಡಿಶಾ ಸರ್ಕಾರ ಕೂಡ ಇದೇ ಹಾದಿಯನ್ನು ಹಿಡಿದು ಮುಟ್ಟಿನ ರಜೆ ಅಧಿಕೃತಗೊಳಿಸಿದ ರಾಜ್ಯಗಳ ಪಟ್ಟಿಯಲ್ಲಿ ಸ್ಥಾನ ಪಡೆದುಕೊಂಡಿದೆ.

ಮುಟ್ಟಿನ ಸಮಯದಲ್ಲಿ ಮಹಿಳೆಯರು ತಮ್ಮ ಮೊದಲ ಅಥವಾ ಎರಡನೇ ದಿನದಂದು ರಜೆಯನ್ನು ಪಡೆದುಕೊಳ್ಳಬಹುದು. ಈ ರಜೆಯು ಸಂಪೂರ್ಣ ಐಚ್ಚಿಕವಾಗಿದ್ದು, ಅವಶ್ಯಕತೆ ಇಲ್ಲವಾದಲ್ಲಿ ರಜೆಯನ್ನು ತೆಗೆದುಕೊಳ್ಳದೆಯೂ ಇರಬಹುದು ಎಂದು ಸರ್ಕಾರ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.

ಈ ಕುರಿತಂತೆ ಕೇಂದ್ರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಅನ್ನಪೂರ್ಣ ದೇವಿ, ಮುಟ್ಟಿನ ರಜೆಯನ್ನು ಕಡ್ಡಾಯಗೊಳಿಸುವ ಯಾವುದೇ ಉದ್ದೇಶ ಇಲ್ಲ ಎಂದು ಹೇಳಿದ್ದಾರೆ.

ಮುಟ್ಟಿನ ರಜೆಯ ಬಗ್ಗೆ ಕೇಂದ್ರ ಸರ್ಕಾರ ಎಲ್ಲ ಕೆಲಸದ ಸ್ಥಳಗಳಿಗೆ ವೇತನ ಸಹಿತ ಮುಟ್ಟಿನ ರಜೆಯನ್ನು ಒದಗಿಸಬೇಕು ಎಂಬ ಪ್ರಸ್ತಾಪವನ್ನು ಕೇಂದ್ರ ಸರ್ಕಾರ ಪರಿಗಣಿಸುತ್ತಿಲ್ಲ ಎಂದು ಲೋಕಸಭೆಯಲ್ಲಿ ಸ್ಪಷ್ಟಪಡಿಸಿದೆ.

- Advertisement -

Latest News

error: Content is protected !!