Friday, June 5, 2026
Homeಕರಾವಳಿಸಿಬ್ಬಂದಿಯಿಲ್ಲದೆ ದೂರವಾಣಿ ವಿನಿಮಯ ಕೇಂದ್ರಕ್ಕೆ ಬೀಗ; ತಬ್ಬಿಬ್ಬಾದ ಗ್ರಾಹಕರು

ಸಿಬ್ಬಂದಿಯಿಲ್ಲದೆ ದೂರವಾಣಿ ವಿನಿಮಯ ಕೇಂದ್ರಕ್ಕೆ ಬೀಗ; ತಬ್ಬಿಬ್ಬಾದ ಗ್ರಾಹಕರು

- Advertisement -
- Advertisement -

ವಿಟ್ಲ: ಇಲ್ಲಿನ ದೂರವಾಣಿ ವಿನಿಮಯ ಕೇಂದ್ರಕ್ಕೆ ಸೋಮವಾರ ಬೆಳಗ್ಗೆ ಸೇವೆಗಾಗಿ ತೆರಳಿದ ಗ್ರಾಹಕರು ಕಚೇರಿಗೆ ಬೀಗ ಹಾಕಿದ್ದನ್ನು ಕಂಡು ತಬ್ಬಿಬ್ಟಾಗಿದ್ದಾರೆ.

ವಿಟ್ಲದ ಪ್ರಮುಖ ಕೇಂದ್ರದಲ್ಲಿ ಸಿಬ್ಬಂದಿ ತಡವಾಗಿಯಾದರೂ ಬರಬಹುದು ಎಂಬ ನಂಬಿಕೆಯಿಂದ ಕಾದಂತಹ ಗ್ರಾಹಕರು ಕೊನೆಗೂ ಯಾವುದೇ ಕಾರ್ಯ ನೆರವೇರಿಸಲಾಗದೇ ನಿರಾಸೆಯಿಂದ ಹಿಂದಿರುಗಬೇಕಾಯಿತು.

ಜೆಟಿಒ ದೂರವಾಣಿ ಕೇಂದ್ರದಲ್ಲಿ ಇಲ್ಲ. ಬಂಟ್ವಾಳ ಜೆಟಿಒ ಅವರಿಗೆ ಚಾರ್ಜ್‌ ಇದೆ ಮತ್ತು ಒಬ್ಬರು ಮಹಿಳಾ ಸಿಬ್ಬಂದಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಸೋಮವಾರ ಜೆಟಿಒ ಇರಲಿಲ್ಲ. ಮಹಿಳಾ ಸಿಬ್ಬಂದಿ ರಜೆ ಹಾಕಿದ್ದಾರೆ. ಅದೇ ಕಾರಣಕ್ಕೆ ಒಳಗೆ ಯಾರೂ ಇರಲಿಲ್ಲ. ಆದ್ದರಿಂದ ಬೀಗ ಹಾಕಲಾಗಿದೆ ಎಂದು ಮತ್ತೆ ತಿಳಿದುಬಂದಿದೆ.

- Advertisement -

Latest News

error: Content is protected !!