- Advertisement -
- Advertisement -
ಬಂಟ್ವಾಳ: ಪಾದಾಚಾರಿ ಮಹಿಳೆಗೆ ಪಿಕಪ್ ವಾಹನ ಡಿಕ್ಕಿಯಾಗಿ ಗಂಭೀರ ಗಾಯಗಳಾಗಿರುವ ಘಟನೆ ವಾಮದಪದವಿನಲ್ಲಿ ನಡೆದಿದೆ. ಪಿಲಿಮೊಗರು ಗ್ರಾಮದ ಜತ್ತನಕೆರೆ ನಿವಾಸಿ ಪುಷ್ಪಾವತಿ ( 70) ಗಾಯಗೊಂಡ ಮಹಿಳೆ.
ಪುಷ್ಪಾವತಿ ಅವರು ಬಿಸಿರೋಡಿನಿಂದ ಬಸ್ ನಲ್ಲಿ ಬಂದು ವಾಮದಪದವಿನಲ್ಲಿ ಇಳಿದು ಮನೆ ಕಡೆಗೆ ಹೋಗುವ ವೇಳೆ ಪಿಕಪ್ ಇವರಿಗೆ ಡಿಕ್ಕಿಯಾಗಿದೆ.ಡಿಕ್ಕಿಯ ರಭಸಕ್ಕೆ ಇವರು ಡಾಂಬರು ರಸ್ತೆಗೆ ಎಸೆಯಲ್ಪಟ್ಟಿದ್ದು, ತಲೆಗೆ ಗಂಭೀರವಾದ ಗಾಯಗಳಾಗಿವೆ. ಸದ್ಯ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಬೆಂಜನಪದವಿನಲ್ಲಿ ಆತ್ಮಹತ್ಯೆ ಮಾಡಿಕೊಂಡ ಸಂಬಂಧಿ ಬಾಲಕನ ಅಂತ್ಯ ಸಂಸ್ಕಾರದ ಕಾರ್ಯ ಮುಗಿಸಿ ವಾಪಸು ಆಗುತ್ತಿದ್ದ ವೇಳೆ ಈ ಘಟನೆ ಸಂಭವಿಸಿದೆ. ಮಗನ ಜೊತೆಗೆ ಬೈಕಿನಲ್ಲಿ ಬರುವ ವೇಳೆ ಮಳೆ ಬಂದ ಕಾರಣ ಮಗ ತಾಯಿಯನ್ನು ಬಸ್ ನಲ್ಲಿ ಕಳುಹಿಸಿದ್ದ ಎಂದು ಹೇಳಲಾಗಿದೆ. ಪುಂಜಾಲಕಟ್ಟೆ ಪೋಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದ್ದು, ಸ್ಥಳಕ್ಕೆ ಪೋಲೀಸರು ಭೇಟಿ ನೀಡಿದ್ದಾರೆ.
- Advertisement -