Wednesday, June 3, 2026
Homeಕರಾವಳಿಉಡುಪಿಕಾರ್ಕಳ: ಆಭರಣ ಪೆಟ್ಟಿಗೆ ತಯಾರಿಕ ಕಾರ್ಖಾನೆಯಲ್ಲಿ ಬೆಂಕಿ, ಲಕ್ಷಾಂತರ ರೂ. ನಷ್ಟ

ಕಾರ್ಕಳ: ಆಭರಣ ಪೆಟ್ಟಿಗೆ ತಯಾರಿಕ ಕಾರ್ಖಾನೆಯಲ್ಲಿ ಬೆಂಕಿ, ಲಕ್ಷಾಂತರ ರೂ. ನಷ್ಟ

- Advertisement -
- Advertisement -

ಬೆಳ್ಮಣ್: ಮುಂಡ್ಕೂರು ಗ್ರಾಮ ಪಂಚಾಯತ್ ಸದಸ್ಯೆ ಸ್ವಾತಿ ಸುಧೀರ್ ಶೆಣೈ ಮಾಲಕತ್ವದ ಆಭರಣಗಳ ಪೆಟ್ಟಿಗೆ ಉತ್ಪಾದನಾ ಘಟಕದಲ್ಲಿ ಅಗ್ನಿ ಅವಗಢ ಸಂಭವಿಸಿ ಲಕ್ಷಾಂತರ ಮೌಲ್ಯದ ವಸ್ತುಗಳು ಬೆಂಕಿಗಾಹುತಿಯಾದ ಘಟನೆ ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಮಂಡ್ಕೂರು ಗ್ರಾಮದಲ್ಲಿ ಇಂದು ನಡೆದಿದೆ.

ಮುಂಡ್ಕೂರು ಗ್ರಾಮ ಪಂಚಾಯತ್ ರಸ್ತೆಯ ಮಾರ್ಕೆಟ್ ಕಟ್ಟಡ ಬಳಿಯ ಮೆ.ಸ್ವಾತಿ ಪ್ರೊಸೆಸರ್ಸ್ ಎಂಬ ಆಭರಣಗಳ ಪೆಟ್ಟಿಗೆಗಳ ಉತ್ಪಾದನಾ ಘಟಕದಲ್ಲಿ ಈ ಅವಘಡ ಸಂಭವಿಸಿದೆ.

ಅಗ್ನಿಶಾಮಕ ದಳದವರು ಸ್ಥಳಕ್ಕೆ ಆಗಮಿಸಿ ಬೆಂಕಿನ ನಂದಿಸುವ ಕಾರ್ಯದಲ್ಲಿ ಯಶಸ್ವಿಯಾಗಿದ್ದಾರೆ.

ಅಂದಾಜು 15ಲಕ್ಷ ರೂ ನಷ್ಟ
ಲಾಕ್ ಡೌನ್ ಕಾರಣದಿಂದ ಈ ಘಟಕದಲ್ಲಿ ಮಾರಾಟವಾಗದೇ ಉಳಿದಿದ್ದ ಸಿದ್ದ ವಸ್ತುಗಳು,ಕಚ್ಚಾ ವಸ್ತುಗಳು ಇದ್ದವು. ಬೆಂಕಿಯ ಕೆನ್ನಾಲಿಗೆಗೆ ಇವುಗಳೊಂದಿಗೆ ಸಂಸ್ಥೆಯ ಕಂಪ್ಯೂಟರ್ ಗಳು ಸುಟ್ಟು ಕರಕಲಾಗಿವೆ. ಘಟನೆಯಲ್ಲಿ ಸುಮಾರು 15 ಲಕ್ಷ ರೂ. ಮೌಲ್ಯದ ನಷ್ಟ ಉಂಟಾಗಿದೆ ಎಂದು ಅಂದಾಜಿಸಲಾಗಿದೆ.

- Advertisement -

Latest News

error: Content is protected !!