- Advertisement -
![]()
- Advertisement -
ಬೆಳ್ತಂಗಡಿ : ಮನೆಯ ಬಾವಿಗೆ ಜಾರಿ ಬಿದ್ದು ವೃದ್ಧೆಯೊಬ್ಬರು ಸಾವನ್ನಪ್ಪಿದ ಘಟನೆ ಬೆಳ್ತಂಗಡಿ ನಗರದಲ್ಲಿ ನಡೆದಿದೆ.ಬೆಳ್ತಂಗಡಿ ನಗರದ ಗುರುದೇವ ಕಾಲೇಜ್ ರಸ್ತೆಯಲ್ಲಿರುವ ಸೀಡ್ ಫಾರ್ಮ್ ಬಳಿ ಇರುವ ಮನೆಯ ಬಾವಿಗೆ ಆ.2 ರಂದು ಸಂಜೆ ಆಕಸ್ಮಿಕವಾಗಿ ಜಾರಿ ಬಿದ್ದು ಸುಮಾಲಿನಿ ಜೈನ್ (63) ಎಂಬವರು ಸಾವನ್ನಪ್ಪಿದ್ದಾರೆ.

ಕೆಲಸದ ನಿಮಿತ್ತ ಸುಮಾಲಿನಿ ಜೈನ್ ಅವರ ಪತಿ ಹೊರಗಡೆ ಹೋಗಿದ್ದು ಮನೆಗೆ ಬಂದಾಗ ಬಾವಿಯಲ್ಲಿ ಶಬ್ದ ಕೇಳಿಸಿದೆ. ನೋಡಿದಾಗ ಪತ್ನಿ ನೀರಿನಲ್ಲಿ ರಕ್ಷಣೆಗೆ ಕೂಗಾಡುತ್ತಿರೋದು ಗೊತ್ತಾಗಿದೆ. ತಕ್ಷಣ ಆಂಬುಲೆನ್ಸ್ ಬಾಬಾ ಜಲೀಲ್ ಅವರಿಗೆ ಕರೆ ಮಾಡಿ ಕರೆಸಿ ಬಾವಿಗೆ ಹಗ್ಗ ಹಾಕಿ ವೃದ್ಧೆಯನ್ನು ಮೇಲಕ್ಕೆತ್ತಿ ಬೆಳ್ತಂಗಡಿ ತಾಲೂಕು ಸರಕಾರಿ ಆಸ್ಪತ್ರೆಗೆ ಸಾಗಿಸಿದ್ದಾರೆ. ಅಷ್ಟರಲ್ಲಿ ಅವರು ಸಾವನ್ನಪ್ಪಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ. ಈ ಬಗ್ಗೆ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -


