Sunday, June 7, 2026
Homeಕರಾವಳಿಸಂತೋಷ್ ಪಿ ಕೋಟ್ಯಾನ್ ಬಳಂಜ ರವರಿಗೆ ಪ್ರತಿಷ್ಠಿತ "ಸಾಧನಾಶ್ರೀ ಪುರಸ್ಕಾರ"

ಸಂತೋಷ್ ಪಿ ಕೋಟ್ಯಾನ್ ಬಳಂಜ ರವರಿಗೆ ಪ್ರತಿಷ್ಠಿತ “ಸಾಧನಾಶ್ರೀ ಪುರಸ್ಕಾರ”

- Advertisement -
- Advertisement -

ಬೆಳ್ತಂಗಡಿ:ಮಂಗಳೂರಿನಲ್ಲಿ ನಡೆದ ಜೆಸಿಐ ಅಭಿವೃದ್ಧಿ ಮತ್ತು ಬೆಳವಣಿಗೆ ಹಾಗೂ ವ್ಯವಹಾರ ವಿಭಾಗದ ಸಮ್ಮೇಳನ ವೈಭವ – 2024 ಕಾರ್ಯಕ್ರಮದಲ್ಲಿ ಜೆಸಿಐ ಬೆಳ್ತಂಗಡಿ ಮಂಜುಶ್ರೀಯ ಪೂರ್ವಾಧ್ಯಕ್ಷ, ಬಳಂಜ ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಸಮಿತಿ ಅಧ್ಯಕ್ಷ ಸಂತೋಷ್ ಪಿ ಕೋಟ್ಯಾನ್ ಬಳಂಜ ಅವರಿಗೆ ವೃತ್ತಿ ಮತ್ತು ಸಮಾಜಸೇವಾ ಕಾರ್ಯಸಾಧನೆಗಾಗಿ ಸಾಧನಾಶ್ರೀ- 2024 ಪ್ರಶಸ್ತಿ ನೀಡಿ ಜುಲೈ 28 ರಂದು ಗೌರವಿಸಲಾಯಿತು.

2011 ರಲ್ಲಿ ಜೆಸಿಐ ಬೆಳ್ತಂಗಡಿ ಮಂಜುಶ್ರೀ ಸಂಸ್ಥೆಗೆ ಸದಸ್ಯರಾಗಿ ಸೇರ್ಪಡೆಗೊಂಡು ನಂತರ ಕೋಶಾಧಿಕಾರಿಯಾಗಿ, ಉಪಾಧ್ಯಕ್ಷರಾಗಿ, ಕಾರ್ಯದರ್ಶಿಯಾಗಿ, ಜೆಸಿ ಸಪ್ತಾಹದ ಕಾರ್ಯಕ್ರಮ ಸಂಯೋಜಕರಾಗಿ ವಿವಿಧ ಹುದ್ದೆಗಳನ್ನು ಅಲಂಕರಿಸಿ 2017 ರಲ್ಲಿ ಘಟಕಾಧ್ಯಕ್ಷರಾಗಿ  ಹಲವಾರು ಜನಪರ ಕಾರ್ಯಕ್ರಮಗಳನ್ನು ಮಾಡುವ ಮೂಲಕ ಸಮಾಜದಲ್ಲಿ ಗುರುತಿಸಿಕೊಂಡಿದ್ದರು.

ಸಾಮಾಜಿಕ,ಧಾರ್ಮಿಕ,ಶೈಕ್ಷಣಿಕ ಕ್ಷೇತ್ರದಲ್ಲಿ ತನ್ನನ್ನು ತಾನು ಸಕ್ರೀಯವಾಗಿ ತೊಡಗಿಸಿಕೊಂಡು, ಹಲವಾರು ಸಂಘ ಸಂಸ್ಥೆಗಳಲ್ಲಿ ಕ್ರಿಯಾಶೀಲವಾಗಿ ತೊಡಗಿಸಿಕೊಂಡಿದ್ದಾರೆ.ವೃತ್ತಿ ಕ್ಷೇತ್ರದಲ್ಲಿ ಸಲ್ಲಿಸುತ್ತಿರುವ ಅಪ್ರತಿಮ ಸೇವೆಯನ್ನು ಗುರುತಿಸಿ, ಜೆಸಿಐ ವಲಯ 15ರ ವ್ಯವಹಾರ ಸಮ್ಮೇಳನ ‘ವೈಭವ’ ಸಾಧಕ ಜೇಸಿಗಳ ಸಮಾಗಮದಲ್ಲಿ ಸಾಧನಾಶ್ರೀ ಪುರಸ್ಕಾರ ನೀಡಿ ಗೌರವಿಸಲಾಗಿದೆ.

- Advertisement -

Latest News

error: Content is protected !!