Friday, June 5, 2026
Homeಕರಾವಳಿಕೆಲ ದಿನಗಳ ಹಿಂದೆ ನೇತ್ರಾವತಿ ಸೇತುವೆಯಿಂದ ಹಾರಿದ್ದ ವ್ಯಕ್ತಿಯ ಮೃತದೇಹ ಪತ್ತೆ

ಕೆಲ ದಿನಗಳ ಹಿಂದೆ ನೇತ್ರಾವತಿ ಸೇತುವೆಯಿಂದ ಹಾರಿದ್ದ ವ್ಯಕ್ತಿಯ ಮೃತದೇಹ ಪತ್ತೆ

- Advertisement -
- Advertisement -

ಮಂಗಳೂರು: ಕೆಲದಿನಗಳ ಹಿಂದೆ ನಗರದ ಹೊರವಲಯ ಉಳ್ಳಾಲ ತೊಕ್ಕೊಟ್ಟು ಸಮೀಪದ ನೇತ್ರಾವತಿ ಸೇತುವೆ ಮೇಲೆ ಕೊಡೆಯಿಟ್ಟು ನದಿಗೆ ಹಾರಿದ್ದ ಹರೇಕಳ ದ ಯುವಕನ ಶವ ಜೆಪ್ಪು ಪಟ್ಲ ಸಮೀಪ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ.

ಹರೇಕಳ ಶಾಲೆ ಬಳಿಯ ನಿವಾಸಿ ಕಿಶೋರ್ ಅಡ್ಯಂತಾಯ(36) ಮೃತರು.

ಮನೆಯಲ್ಲಿ ತಂದೆಯೊಂದಿಗೆ ವಾಸವಿದ್ದ ಕಿಶೋರ್ ವಾರದ ಹಿಂದೆ ನಾಪತ್ತೆಯಾಗಿದ್ದರು. ಜೀವನದಲ್ಲಿ ಜಿಗುಪ್ಸೆ ಹೊಂದಿ ನೇತ್ರಾವತಿ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಶಂಕಿಸಲಾಗಿದೆ.

ಆತ್ಮಹತ್ಯೆಗೆ ತಡೆಯಲು ಸೇತುವೆಗೆ ಬೇಲಿ ಹಾಕುವ ಕಾಮಗಾರಿಗೆ ಶಾಸಕ ವೇದವ್ಯಾಸ ಕಾಮತ್ ಶಿಲಾನ್ಯಾಸ ನೆರವೇರಿಸಿದ ದಿನವೇ ಸೇತುವೆ ಬಳಿ ಕೊಡೆ ಪತ್ತೆಯಾಗಿದ್ದು, ಉಳ್ಳಾಲ ಠಾಣಾ ಪೊಲೀಸರಿಗೆ ಮಾಹಿತಿ ನೀಡಿದ್ದರೂ ಪೊಲೀಸರು ಸಿಬ್ಬಂದಿಯಿಲ್ಲ ಎಂಬ ಕಾರಣ ನೀಡಿ ಸ್ಥಳಕ್ಕೆ ಭೇಟಿ ನೀಡಿರಲಿಲ್ಲ.

ಹಾಗೆಯೇ ಘಟನೆಯ ಕುರಿತು ಕಂಕನಾಡಿ ಪೊಲೀಸರಿಗೆ ಯಾವುದೇ ಮಾಹಿತಿ ಇರಲಿಲ್ಲ ಎನ್ನಲಾಗಿದೆ.

- Advertisement -

Latest News

error: Content is protected !!