Saturday, June 6, 2026
Homeಚಿಕ್ಕಮಗಳೂರುಕಾಫಿನಾಡಲ್ಲಿ ಗಾಳಿ ಮಳೆಯ ಅಬ್ಬರ; ಯುವಕನ ತಲೆಯ ಮೇಲೆ ಉರುಳಿ ಬಿದ್ದ ವಿದ್ಯುತ್ ಕಂಬ

ಕಾಫಿನಾಡಲ್ಲಿ ಗಾಳಿ ಮಳೆಯ ಅಬ್ಬರ; ಯುವಕನ ತಲೆಯ ಮೇಲೆ ಉರುಳಿ ಬಿದ್ದ ವಿದ್ಯುತ್ ಕಂಬ

- Advertisement -
- Advertisement -

ಚಿಕ್ಕಮಗಳೂರು: ಗಾಳಿ ಮಳೆಯ ಪರಿಣಾಮದಿಂದ ರಸ್ತೆ ಬದಿ ನಡೆದುಕೊಂಡು ಹೋಗುತ್ತಿದ್ದ ಯುವಕನ ತಲೆಯ ಮೇಲೆ ವಿದ್ಯುತ್ ಕಂಬ ಬಿದ್ದು ಗಂಭೀರ ಗಾಯಗೊಂಡಿರುವ ಘಟನೆ ಸೋಮವಾರದಂದು ಮೂಡಿಗೆರೆ ತಾಲೂಕು ತುಂಬರಗಡಿ ಗ್ರಾಮದಲ್ಲಿ ನಡೆದಿದೆ.

ಗ್ರಾಮದ ದಿವೀತ್ ಎಂಬ ಯುವಕ ಬಸ್ ಇಳಿದು ಮನೆಗೆ ತೆರಳುತ್ತಿದ್ದ ಈ ವೇಳೆ ವಿದ್ಯುತ್ ಕಂಬ ಮೈಮೇಲೆ ಬಿದ್ದಿದೆ. ಯುವಕನ ತಲೆಗೆ ಗಂಭೀರ ಗಾಯವಾಗಿದ್ದು ಆಸ್ಪತ್ರೆಗೆ ದಾಖಲಾಗಿದ್ದಾನೆ. ಕೂದಲೆಳೆ ಅಂತರದಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದಾನೆ.

ಬಾರೀ ಪ್ರಮಾಣದಲ್ಲಿ ಗಾಳಿ ಬೀಸುತ್ತಿದ್ದು ವಿದ್ಯುತ್ ಕಂಬಗಳು ಮರಗಳು ಧರೆಗುರುಳುತ್ತಿವೆ. ಭಾನುವಾರ ಚಲಿಸುತ್ತಿದ್ದ ಕಾರಿನ ಮೇಲೆ ಮರ ಬಿದ್ದು ಕೂದಲೆಳೆ ಅಂತರದಲ್ಲಿ ಕಾರಿನಲ್ಲಿದ್ದವರು ಪಾರಾಗಿದ್ದಾರೆ.

- Advertisement -

Latest News

error: Content is protected !!