Thursday, June 4, 2026
Homeತಾಜಾ ಸುದ್ದಿಜಮ್ಮು-ಕಾಶ್ಮೀರ: ಬಿಜೆಪಿ ನಾಯಕ ಶೇಖ್ ವಾಸಿಮ್ ರನ್ನು ಹತ್ಯೆಗೈದ ಭಯೋತ್ಪಾದಕರು

ಜಮ್ಮು-ಕಾಶ್ಮೀರ: ಬಿಜೆಪಿ ನಾಯಕ ಶೇಖ್ ವಾಸಿಮ್ ರನ್ನು ಹತ್ಯೆಗೈದ ಭಯೋತ್ಪಾದಕರು

- Advertisement -
- Advertisement -

ಶ್ರೀನಗರ: ಜಮ್ಮು ಕಾಶ್ಮೀರದ ಬಿಜೆಪಿ ನಾಯಕ ಶೇಖ್ ವಾಸಿಮ್ ಅವರ ತಂದೆ ಮತ್ತು ಸೋದರನನ್ನು ಭಯೋತ್ಪಾದಕರು ಗುಂಡಿಕ್ಕಿ ಹತ್ಯೆ ಮಾಡಿದ ಘಟನೆ ಬಡಿಪೋರಾ ಜಿಲ್ಲಯಲ್ಲಿ ನಡೆದಿದೆ.

ಬಿಜೆಪಿ ನಾಯಕ ಶೇಖ್ ವಾಸಿಮ್ ಹಾಗೂ ಅವರ ತಂದೆ ಮತ್ತು ಸಹೋದರ ಅಂಗಡಿಯೊಂದರಲ್ಲಿ ಕುಳಿತಿದ್ದ ವೇಳೆ ದಾಳಿ ಮಾಡಿದ ಭಯೋತ್ಪಾದಕರು ಅವರ ಮೇಲೆ ಗುಂಡಿನ ಮಳೆ ಸುರಿದಿದ್ದಾರೆ. ಈ ಘಟನೆಯಲ್ಲಿ ತೀವ್ರವಾಗಿ ಗಾಯಗೊಂಡಿದ್ದ ಮೂವರನ್ನು ಆಸ್ಪತ್ರೆಗೆ ದಾಖಲಿಸಿದ್ದರೂ ತೀವ್ರ ರಕ್ತಸ್ರಾವದಿಂದ ಮೂವರು ಮೃತಪಟ್ಟಿದ್ದಾರೆ.

ಈ ದಾಳಿ ಬಿಜೆಪಿ ನಾಯಕನ ಸಾವು ಕಣಿವೆ ಪ್ರದೇಶದಲ್ಲಿ ಭದ್ರತಾ ಕೊರತೆಯನ್ನು ಎತ್ತಿ ತೋರಿಸುತ್ತದೆ. ಸೂಕ್ಷ್ಮ ಪ್ರದೇಶವಾಗಿರುವುದರಿಂದ ಶೇಖ್ ವಾಸಿಮ್ ಗೆ 8 ಮಂದಿ ಭದ್ರತಾ ಪಡೆಗಳನ್ನು ನಿಯೋಜಿಸಲಾಗಿತ್ತು. ಆದರೆ ನಿನ್ನೆ ಭಯೋತ್ಪಾದಕರು ದಾಳಿ ಮಾಡಿದ್ದ ಸಂದರ್ಭದಲ್ಲಿ ಒಬ್ಬರೂ ಕೂಡ ಅವರ ಜೊತೆ ಇರಲಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

ಕರ್ತವ್ಯಲೋಪ ಎಸಗಿದ ಆರೋಪದ ಮೇಲೆ ಭದ್ರತಾ ಪಡೆ ಸಿಬ್ಬಂದಿಗಳನ್ನು ಬಂಧಿಸಲಾಗಿದ್ದು ತನಿಖೆ ನಡೆಯುತ್ತಿದೆ.

ಪ್ರಧಾನಿ ಮೋದಿಯವರಿಂದ ಸಂತಾಪ
ಈ ಘಟನೆ ಬಗ್ಗೆ ನಿನ್ನೆ ತಡರಾತ್ರಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ದೂರವಾಣಿ ಕರೆ ಮಾಡಿ ಮಾಹಿತಿ ಪಡೆದಿದ್ದಾರೆ.ಮೃತ ಶೇಖ್ ವಾಸಿಮ್ ಕುಟುಂಬಕ್ಕೆ ಸಂತಾಪ ಸೂಚಿಸಿದ್ದಾರೆ ಎಂದು ಕೇಂದ್ರ ಸಚಿವ ಡಾ ಜಿತೇಂದ್ರ ಸಿಂಗ್ ತಿಳಿಸಿದ್ದಾರೆ.

- Advertisement -

Latest News

error: Content is protected !!