ನವದೆಹಲಿ: ಕೊನೆಗೂ ಹಾರ್ದಿಕ್ ಪಾಂಡ್ಯ ಹಾಗೂ ತಾಶಾ ಸ್ಟಾಂಕೋವಿಕ್ ಪರಸ್ಪರ ದೂರವಾಗಿದ್ದಾರೆ ಎಂದು ಹರಿದಾಡುತ್ತಿದ್ದ ಸುದ್ದಿ ನಿಜವಾಗಿದೆ. ನಾವಿಬ್ಬರು ದೂರವಾಗಿದ್ದೇವೆ ಅನ್ನೋದನ್ನು ಹಾರ್ದಿಕ್ ಪಾಂಡ್ಯ ಅವರೇ ಖಚಿತಪಡಿಸಿದ್ದಾರೆ.

ಈ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಾಕಿರುವ ಹಾರ್ದಿಕ್ ಪಾಂಡ್ಯ, “4 ವರ್ಷಗಳ ಕಾಲ ಒಟ್ಟಿಗಿದ್ದ ನಾನು ಹಾಗೂ ನತಾಶಾ ಈಗ ಪರಸ್ಪರ ದೂರವಾಗಲು ನಿರ್ಧರಿಸಿದ್ದೇವೆ” ಎಂದು ಇನ್ಸ್ಟಾ ಗ್ರಾಂ ಪೋಸ್ಟ್’ನಲ್ಲಿ ತಿಳಿಸಿದ್ದಾರೆ. “ನಾವು ಒಟ್ಟಿಗಿರಲು ನಮ್ಮ ಅತ್ಯುತ್ತಮ ಪ್ರಯತ್ನ ಮಾಡಿದ್ದೇವೆ ಮತ್ತು ನಮ್ಮ ಎಲ್ಲವನ್ನೂ ನೀಡಿದ್ದೇವೆ, ಮತ್ತು ಇದು ನಮ್ಮಿಬ್ಬರಿಗೂ ಉತ್ತಮ ಹಿತಾಸಕ್ತಿಯಾಗಿದೆ ಎಂದು ನಾವು ನಂಬುತ್ತೇವೆ” ಎಂದಿದ್ದಾರೆ.”ನಾವು ಒಟ್ಟಿಗೆ ಆನಂದಿಸಿದ ಸಂತೋಷ, ಪರಸ್ಪರ ಗೌರವ ಮತ್ತು ಒಡನಾಟವನ್ನ ಗಮನದಲ್ಲಿಟ್ಟುಕೊಂಡು ಮತ್ತು ನಾವು ಕುಟುಂಬವಾಗಿ ಬೆಳೆದಿದ್ದರಿಂದ ಇದು ನಮಗೆ ಕಠಿಣ ನಿರ್ಧಾರವಾಗಿತ್ತು” ಎಂದು ಅವರು ಹೇಳಿದ್ದಾರೆ.ಅಲ್ಲದೇ ನಮ್ಮ ಮಗ ಅಗಸ್ತ್ಯ ನಮ್ಮಿಬ್ಬರ ಪ್ರಥಮ ಪ್ರಾಶಸ್ತ್ಯನಾಗಿರುತ್ತಾನೆ.ನಾವು ಅವನ ಖುಷಿಗಾಗಿ ಎಲ್ಲವನ್ನು ಮಾಡುತ್ತೇವೆ.ನಿಮ್ಮ ಬೆಂಬಲ ಸದಾ ನಮ್ಮೊಂದಿಗರಲಿ.ಇಂತಹ ಕಷ್ಟದ ಸಮಯದಲ್ಲಿ ನಮ್ಮ ಖಾಸಗಿತನವನ್ನು ಗೌರವಿಸಿ ಎಂದು ಅವರು ಕೇಳಿಕೊಂಡಿದ್ದಾರೆ.