- Advertisement -
![]()
- Advertisement -
ಕಿನ್ನಿಗೋಳಿ: ಕಂಬಳ ಕ್ಷೇತ್ರಗಳಲ್ಲಿ ಸಾಕಷ್ಟು ಹೆಸರು ಮಾಡಿ, ಹಲವು ಮೆಡಲ್ ಗೆದ್ದಿದ್ದ ‘ ಲಕ್ಕಿ’ ಎಂಬ ಕೋಣ ಬುಧವಾರ ಕೊನೆಯುಸಿರೆಳೆದಿದೆ.

ಕಳೆದ ವರ್ಷದ ಕಂಬಳ ಸೀಸನ್ ನಲ್ಲಿ ಲಕ್ಕಿ ಕೋಣ 5 ಮೆಡಲ್ ಗೆಳನ್ನು ಗೆದ್ದಿತ್ತು. ರಾಜಧಾನಿ ಬೆಂಗಳೂರಿನಲ್ಲಿ ಮೊದಲ ಬಾರಿ ನಡೆದ ಕಂಬಳದಲ್ಲಿ ನೇಗಿಲು ಹಿರಿಯ ವಿಭಾಗದಲ್ಲಿ ಲಕ್ಕಿ ಎರಡನೇ ಬಹುಮಾನ ಪಡೆದಿದ್ದ. ಕಕ್ಯಪದವು, ಬೆಂಗಳೂರು, ನರಿಂಗಾನ, ಐಕಳ ಮತ್ತು ಜಪ್ಪು ಕಂಬಳಗಳಲ್ಲಿ ಮೆಡಲ್ ಗೆದ್ದಿದ್ದ.

ವರಪಾಡಿ ಬಡಗುಮನೆ ದಿವಾಕರ ಚೌಟ ಅವರು ಸಾಕಿದ್ದ ಕೋಣ ನಿಧನ ಹೊಂದಿರುವುದು ಹಲವು ಕಂಬಳ ಅಭಿಮಾನಿಗಳಿಗೆ ತೀವ್ರ ದುಃಖ ತಂದಿದೆ. ಹಲವಾರು ಸಂಖ್ಯೆಯಲ್ಲಿ ಕಂಬಳಾಭಿಮಾನಿಗಳು ಆಗಮಿಸಿ ಅಂತಿಮ ದರ್ಶನ ಪಡೆದರು.
- Advertisement -


