Saturday, October 17, 2026
Homeಕರಾವಳಿಉಡುಪಿಉಡುಪಿ: ಕಳೆದ ವರ್ಷ ನಿರ್ಮಾಣಗೊಂಡಿದ್ದ ಸೇತುವೆ ನಿನ್ನೆ ರಾತ್ರಿಯ ಮಳೆಗೆ ಕುಸಿತ

ಉಡುಪಿ: ಕಳೆದ ವರ್ಷ ನಿರ್ಮಾಣಗೊಂಡಿದ್ದ ಸೇತುವೆ ನಿನ್ನೆ ರಾತ್ರಿಯ ಮಳೆಗೆ ಕುಸಿತ

- Advertisement -
- Advertisement -

ಉಡುಪಿ: ಕಳೆದ ವರ್ಷ ನಿರ್ಮಾಣ ಮಾಡಲಾಗಿದ್ದ ಸೇತುವೆ ಈ ವರ್ಷ ಮಳೆಯಿಂದಾಗಿ ಕುಸಿತಗೊಂಡಿರುವ ಘಟನೆ ಕುಂದಾಪುರ ತಾಲೂಕಿನಲ್ಲಿ ನಡೆದಿದೆ.

ಹಾಲಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಭರಣಕೊಳ್ಕಿಯಲ್ಲಿ ಹಾಲಾಡಿಯಿಂದ ಜೋರಾಡಿ ಮುದ್ದೂರು ಸಂಪರ್ಕ ಕಲ್ಪಿಸುವ ಸೇತುವೆ ಕುಸಿತಗೊಂಡಿದೆ.ಗ್ರಾಮಸ್ಥರು ಮತ್ತು ವಿದ್ಯಾರ್ಥಿಗಳು ಪ್ರತಿನಿತ್ಯ ಇದೇ ಸೇತುವೆಯನ್ನು ಬಳಸುತ್ತಿದ್ದು, ನಿನ್ನೆ ರಾತ್ರಿ ಸುರಿದ ಮಳೆಗೆ ಕುಸಿದು ಬಿದ್ದಿದೆ.

25 ಲಕ್ಷ ರೂಪಾಯಿ ವೆಚ್ಚದಲ್ಲಿ ಕಳೆದ ವರ್ಷವಷ್ಟೇ ಸೇತುವೆಯನ್ನು ನಿರ್ಮಾಣ ಮಾಡಲಾಗಿದ್ದು, ಕಳಪೆ ಕಾಮಗಾರಿಯಿಂದಾಗಿ ಕುಸಿದು ಬಿದ್ದಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.

ಸ್ಥಳಕ್ಕೆ ಉಡುಪಿ ಡಿಸಿ ವಿದ್ಯಾಕುಮಾರಿ, ಎಸಿ ರಶ್ಮಿ, ಜಿಲ್ಲಾ ಪಂಚಾಯತ್ ಸಿಇಒ ಮತ್ತು ಕುಂದಾಪುರ ತಹಸೀಲ್ದಾರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

- Advertisement -

Latest News

error: Content is protected !!