Thursday, June 4, 2026
Homeಕರಾವಳಿಮಂಗಳೂರುಅಚ್ಚು ಮುಂಡಾಜೆ ಅವರಿಗೆ ಲಯನ್ಸ್ ಜಿಲ್ಲಾ "ಗೋಲ್ಡನ್ ಅಸಿಸ್ಟೆಂಟ್ ಡಿಸ್ಟ್ರಿಕ್ಟ್ ಕಾರ್ಡಿನೇಟರ್" ಪುರಸ್ಕಾರ

ಅಚ್ಚು ಮುಂಡಾಜೆ ಅವರಿಗೆ ಲಯನ್ಸ್ ಜಿಲ್ಲಾ “ಗೋಲ್ಡನ್ ಅಸಿಸ್ಟೆಂಟ್ ಡಿಸ್ಟ್ರಿಕ್ಟ್ ಕಾರ್ಡಿನೇಟರ್” ಪುರಸ್ಕಾರ

- Advertisement -
- Advertisement -

ಬೆಳ್ತಂಗಡಿ; ದ.ಕ, ಕೊಡಗು, ಚಿಕ್ಕಮಗಳೂರು ಮತ್ತು ಹಾಸನ ಈ ನಾಲ್ಕು ಕಂದಾಯ ಜಿಲ್ಲೆಗಳನ್ನೊಳಗೊಂಡ ಲಯನ್ಸ್ ಜಿಲ್ಲೆ ಇದರ ಜಿಲ್ಲಾ ರಾಜ್ಯಪಾಲರ ಸಂಪುಟದಲ್ಲಿ “ಈದ್ ಸೆಲೆಬರೇಷನ್” ಕಾರ್ಯಕ್ರಮದ ಅಸೋಸಿಯೇಟ್ ಡಿಸ್ಟ್ರಿಕ್ಟ್ ಕಾರ್ಡಿನೇಟರ್ ಆಗಿ ಅತ್ಯುತ್ತಮವಾಗಿ ಸೇವೆ ಸಲ್ಲಿಸಿ, ಮಂಗಳೂರಿನಲ್ಲಿ ನಡೆದ ಈದ್ ಸೆಲೆಬರೇಷನ್ ಕಾರ್ಯಕ್ರಮವನ್ನು ಸುಂದರವಾಗಿ ನಿರೂಪಿಸಿ ಬೆಳ್ತಂಗಡಿ ಲಯನ್ಸ್ ಕ್ಲಬ್ ಸುವರ್ಣ ವರ್ಷದಲ್ಲಿ ಎರಡನೇ ಬಾರಿ ಜಿಲ್ಲೆಯಲ್ಲಿ ಪ್ರಥಮ ಸ್ಥಾನ ಬರುವಲ್ಲಿ ಕೊಡುಗೆ ನೀಡಿದ ಅಶ್ರಫ್ ಆಲಿಕುಂಞಿ ಮುಂಡಾಜೆ (ಅಚ್ಚು ಮುಂಡಾಜೆ) ಅವರಿಗೆ ಲಯನ್ಸ್ ಜಿಲ್ಲಾ ರಾಜ್ಯಪಾಲ ಡಾ. ಮೆಲ್ವಿನ್ ಡಿಸೋಜಾ ಅವರು’ಗೋಲ್ಡನ್ ಅಸೋಸಿಯೇಟ್ ಡಿಸ್ಟ್ರಿಕ್ಟ್ ಕೋ ಆರ್ಟಿನೇಟರ್’ ಈದ್ ಸೆಲೆಬರೇಷನ್ ಗೋಲ್ಡನ್ ಅವಾರ್ಡ್ ನೀಡಿ ಪುರಸ್ಕರಿಸಿದ್ದಾರೆ.ಆ ದಿನದ ಕಾರ್ಯಕ್ರಮ ನಿರೂಪಣೆಯನ್ನು ಮೆಚ್ಚಿ ಲಯನ್ಸ್ ಮಲ್ಟಿಪಲ್ ಕೌನ್ಸಿಲ್ ಚೇರ್ ಪರ್ಸನ್ ರಾಜಶೇಖರಯ್ಯ ಅವರು ಅಂತಾರಾಷ್ಟ್ರೀಯ ಪಿನ್ ತೊಡಿಸಿ ಅವರನ್ನು ವೇದಿಕೆಯಲ್ಲೇ ಗೌರವಿಸಿದ್ದರು.

- Advertisement -

Latest News

error: Content is protected !!