Tuesday, June 9, 2026
Homeಕ್ರೀಡೆಟಿ20 ವಿಶ್ವಕಪ್ ಗೆದ್ದ ಭಾರತ ತಂಡವನ್ನು ಅಭಿನಂದಿಸಿದ ಪ್ರಧಾನಿ ಮೋದಿ

ಟಿ20 ವಿಶ್ವಕಪ್ ಗೆದ್ದ ಭಾರತ ತಂಡವನ್ನು ಅಭಿನಂದಿಸಿದ ಪ್ರಧಾನಿ ಮೋದಿ

- Advertisement -
- Advertisement -

ಹೊಸದಿಲ್ಲಿ: ಟಿ20 ವಿಶ್ವಕಪ್ 2024 ಗೆದ್ದ ಭಾರತ ತಂಡವು ಇಂದು(ಜು. 4) ಭಾರತಕ್ಕೆ ಆಗಮಿಸಿದ್ದು, ತಂಡವು ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾಗಿದೆ. 

ಭಾರತೀಯ ಕ್ರಿಕೆಟ್ ತಂಡವು ಬೆಳಿಗ್ಗೆ 6 ಗಂಟೆಯ ಸುಮಾರಿಗೆ ನವದೆಹಲಿಗೆ ಬಂದಿಳಿದು, ಐಟಿಸಿ ಮೌರ್ಯ ಹೋಟೆಲ್‌ ಗೆ ತೆರಳಿತ್ತು. ಹೋಟೆಲ್ ನಲ್ಲಿ ರೋಹಿತ್ ಬಳಗವು ಅಭೂತಪೂರ್ವ ಸ್ವಾಗತ ಪಡೆದಿದ್ದು, ನೃತ್ಯ ಮಾಡಿ ಸಂಭ್ರಮಿಸಿತು. ಹೋಟೆಲ್‌ನಲ್ಲಿ ವಿಶೇಷ ಕೇಕ್ ಕತ್ತರಿಸಿದರು. ಬಳಿಕ ಅಲ್ಲಿಂದ ತಂಡದ ಬಸ್‌ ನಲ್ಲಿ ಪ್ರಧಾನಿ ಮೋದಿ ಅವರ ನಿವಾಸಕ್ಕೆ ತೆರಳಿತು.

ನಂತರದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ನಾಯಕ ರೋಹಿತ್ ಶರ್ಮಾ, ಕೋಚ್ ರಾಹುಲ್ ದ್ರಾವಿಡ್ ಸೇರಿ ಆಟಗಾರರು ಚರ್ಚಿಸಿದರು. ಮಧ್ಯಾಹ್ನ 1:00 ಗಂಟೆಗೆ ಭಾರತೀಯ ತಂಡವು ಪ್ರಧಾನಿ ಮೋದಿಯವರ ನಿವಾಸದಿಂದ ದೆಹಲಿ ವಿಮಾನ ನಿಲ್ದಾಣಕ್ಕೆ ತೆರಳಿದರು, ಅಲ್ಲಿಂದ ಅವರು ಮುಂದಿನ ಸುತ್ತಿನ ಸಂಭ್ರಮಾಚರಣೆಗಾಗಿ ಮುಂಬೈಗೆ ಹಾರಲಿದ್ದಾರೆ.

- Advertisement -

Latest News

error: Content is protected !!